ಗದಗ-ಬೆಟಗೇರಿ ಅವಳಿ ನಗರದ ಮುಳಗುಂದ ನಾಕಾ, ಫೀಲ್ಡ್ ಮಾರ್ಶಲ್ ಕೆ ಎಂ ಕಾರ್ಯಪ್ಪ ಸರ್ಕಲ್, ಭೂಮರಡ್ಡಿ ವೃತ್ತ, ಮಹಾತ್ಮಾ ಗಾಂಧಿ ವೃತ್ತ ಸೇರಿದಂತೆ ಬೆಟಗೇರಿಯ ಪ್ರಮುಖ ವೃತ್ತಗಳಲ್ಲಿ ಗದಗ ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ನಡೆಸಿದ್ರು.
ಅನ್ನದಾತರ ಮೊಗದಲ್ಲೂ ನಗು ತರಿಸಿದ ಗುಲಾಬಿ..! 1 ಲಕ್ಷ ರೂ. ಖರ್ಚು ಮಾಡಿದ್ರೆ 7 ಲಕ್ಷ ಲಾಭ ಸಿಗೋದು ಪಕ್ಕಾ!
ಡಿಫೆಕ್ಟಿವ್ ನಂಬರ್ ಪ್ಲೇಟ್, ಮುರಿದ ನಂಬರ್ ಪ್ಲೇಟ್, ಹೆಲ್ಮೆಟ್ ಹಾಕದೇ ಓಡಾಡೋ, ಲೈಸನ್ಸ್ ಇಲ್ಲದೇ ಓಡಾಡೋ ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸೋ ಕೆಲಸ ಮಾಡಿದ್ದಾರೆ. ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸುವಂತೆ ತಿಳಿಸಿದ್ರು. ಅಪ್ರಾಪ್ತ ವಯಸ್ಕರ ಕೈಗೆ ವಾಹನಗಳನ್ನ ನೀಡದಂತೆ ತಿಳಿ ಹೆಳಿದ್ರು. ನಿಯಮ ಮೀರಿ ಓಡಾಡೋ ವಾಹನ ಸವಾರರಿಗೆ ದಂಡವನ್ನ ವಿಧಿಸಿದ್ರು.