ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಅಲ್ಲಿನ ಗಣಿ ಧೂಳಿನ ಜೊತೆಗೆ ಅಂದರ್ ಬಾಹರ್, ಜೂಜಾಟ, ರಿಯಲ್ ಎಸ್ಟೇಟ್ ಕೂಡ ಅಷ್ಟೇ ಸದ್ದು ಮಾಡುತ್ತಿವೆ ಅಂದರೆ ತಪ್ಪಿಲ್ಲ ಬಿಡಿ. ಆಂಧ್ರಪ್ರದೇಶದ ಗಡಿಯಾಗಿರೋದರಿಂದ ಬಳ್ಳಾರಿಯಲ್ಲಿ ಇಸ್ಪೀಟ್ ಅಡ್ಡೆಗಳು , ಕ್ಲಬ್ ಗಳಿಗೇನು ಇಲ್ಲಿ ಕಡಿಮೆ ಇಲ್ಲ. ಇದೇ ಬಳ್ಳಾರಿಯಲ್ಲಿ ಕೆಲ ಅಧಿಕಾರಿಗಳ ಕೃಪಾಕಟಾಕ್ಷಿದಿಂದ ಕೆಲ ಪ್ರಭಾವಿಗಳು ಇಸ್ಪೀಟ್ ಅಡ್ಡೆಯನ್ನ ಅವ್ಯಾಹಯವಾಗಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಬಳ್ಳಾರಿ ಎಸ್ಪಿ ಡಾ. ಶೋಭಾರಾಣಿ ಗಮನಕ್ಕೆ ಬಂದಿದ್ದೇ ತಡ ಅಧಿಕಾರಿಗಳು ಮತ್ತು ಇಸ್ಪೀಟ್ ದಂಧೆಕೋರರಿಗೆ ಸರಿಯಾಗೇ ಬಿಸಿಮುಟ್ಟಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಜೂಜಾಟದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಎಸ್ಪಿ ಶೋಭಾರಾಣಿ ಖುದ್ದು ತಾವೇ ಫೀಲ್ಡ್ ಗಿಳಿದಿದ್ದಾರೆ. ಜಿಲ್ಲೆಯ ಹಲವೆಡೆ ಹಲವು ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಹಲವರನ್ನ ಬಂಧಿಸಿದ್ದಾರೆ. ಬಳ್ಳಾರಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡ್ತಿರೋ ಕೆಲ ಹಿರಿಯ ಅಧಿಕಾರಿಗಳ ಈ ಭ್ರಷ್ಟರ ಬೆನ್ನಿಗೆ ನಿಂತಿದ್ದಾರೆ ಅನ್ನೋ ಆರೋಪ ಕೂಡಿದೆ. ಇದೇ ಕಾರಣಕ್ಕೆ ಇನ್ಮುಂದೆ ಬಳ್ಳಾರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ನಡೆದ್ರೆ, ಅದಕ್ಕೆ ಸ್ಥಳೀಯ ಅಧಿಕಾರಿಗಳ ಹೊಣೆಯಾಗಲಿದ್ದಾರೆ ಅನ್ನೋ ಖಡಕ್ ವಾರ್ನಿಂಗ್ ಕೂಡ ಮಾಡಿದ್ದಾರಂತೆ. ಕೇವಲ ಇಸ್ಪೀಟ್ ಅಷ್ಟೇ ಅಲ್ಲದೆ ರಿಯಲ್ ಎಸ್ಟೇಟ್, ರೌಡಿಸಂ, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆ ಬಂದ್ ಆಗುವಂತೆ ಕೂಡ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನೂ ಅಷ್ಟೇ ಅಲ್ಲದೆ ಕೆಲ ಪ್ರಭಾವಿಳು ಅಧಿಕಾರಿಗಳ ಜೊತೆಗೆ ಶಾಮೀಲಾಗಿದೆ. ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಮಾಡ್ತಿರೋ ಬಗ್ಗೆ ಎಸ್ಪಿ ಶೋಭಾರಣಿ ಗಮನಕ್ಕೆ ಬಂದಿದ್ದು ಈ ಬಗ್ಗೆ ವಿಚಾರಣೆ ನಡೆಸಲು ವಿಶೇಷ ತಂಡ ರಚನೆ ಮಾಡಿ ಈ ಕಾಳಸಂತೆಯ ಅನ್ನಗಳ್ಳರ ಪತ್ತೆಗೂ ಮುಂದಾಗಿದ್ದಾರೆ.