ಸಿಯೋಲ್:- ನಿನ್ನೆ ತಾನೇ ತುರ್ತು ಮಿಲಿಟರಿ ಆಡಳಿತ ಹೇರಿದ್ದ ದಕ್ಷಿಣ ಕೊರಿಯಾ, ಉಲ್ಟಾ ಹೊಡೆದಿದ್ದು, ಕೆಲವೇ ಗಂಟೆಗಳಲ್ಲಿ ತನ್ನ ಆದೇಶ ವಾಪಸ್ ಪಡೆದುಕೊಂಡಿದೆ.
ಅಪಘಾತದಲ್ಲಿ ಫ್ಯಾಷನ್ ಡಿಸೈನರ್ ಸಾವು ಕೇಸ್: ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ!
ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ದೇಶದಲ್ಲಿ ಹೊರಡಿಸಿದ್ದ ತುರ್ತು ಮಿಲಿಟರಿ ಆಡಳಿತವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆದಿದ್ದಾರೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್-ಯೋಲ್ ಮಂಗಳವಾರ ರಾತ್ರಿ ಆಘಾತಕಾರಿ ಘೋಷಣೆಯನ್ನು ಮಾಡಿದ್ದರು. ದೇಶದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಮಿಲಿಟರಿ ಆಡಳಿತವನ್ನು ಘೋಷಿಸಲಾಗಿತ್ತು. ಅಧ್ಯಕ್ಷ ಯುನ್ ಸುಕ್-ಯೋಲ್ ಅವರ ಘೋಷಣೆಯ ನಂತರ, ದಕ್ಷಿಣ ಕೊರಿಯಾದ ಶಾಸಕರು ಸಮರ ಕಾನೂನನ್ನು ಬಲವಾಗಿ ವಿರೋಧಿಸಿದರು.
ಅಧ್ಯಕ್ಷರ ನಿರ್ಧಾರವನ್ನು ಖಂಡಿಸಲು ರಾಷ್ಟ್ರೀಯ ಅಸೆಂಬ್ಲಿಯ ಮಧ್ಯರಾತ್ರಿಯ ಅಧಿವೇಶನದಲ್ಲಿ ಅವರು ಸಮರ ಕಾನೂನನ್ನು ಹೇರುವುದರ ವಿರುದ್ಧ ಸರ್ವಾನುಮತದಿಂದ ಮತ ಚಲಾಯಿಸಿದರು. ಸೇನಾಡಳಿತದ ಮೂಲಕ ಮುಕ್ತ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವನ್ನು ಮರು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.