ಬೆಂಗಳೂರು: ಮಾಜಿ ಸಚಿವ ಹೆಚ್ಡಿ ರೇವಣ್ಣ ಕುಟುಂಬಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿಕ ಸೂರಜ್ ರೇವಣ್ಣ ಮೇಲೂ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಹೆಚ್ಡಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಇದ್ದಾರೆ. ಆದರೆ, ಹಾಸನ ಮತ್ತು ಕೆಆರ್ ನಗರಕ್ಕೆ ತೆರಳದಂತೆ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಇನ್ನೂ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಪತ್ನಿ ಯಾರು, ಅವರಿಂದ ವಿಚ್ಛೇದನ ಪಡೆಯಲು ಕಾರಣವೇನೆಂದು ಈಗ ಭಾರೀ ಚರ್ಚೆಯಾಗುತ್ತಿದೆ. 2018 ರಲ್ಲಿ ಸೂರಜ್ ರೇವಣ್ಣ, ಸಾಗರಿಕಾ ರಮೇಶ್ ಎಂಬವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಹಿರಿಯರು ಒಪ್ಪಿ ಮಾಡಿದ ಮದುವೆ ಇದಾಗಿತ್ತು. ಸಾಗರಿಕಾ ಇಂಜಿನಿಯಿರಿಂಗ್ ಪದವೀಧರೆ ಎನ್ನಲಾಗಿದೆ. ಸೂರಜ್ ಕೂಡಾ ವೈದ್ಯಕೀಯ ಪದವೀಧರ. ಆದರೆ ಈಗ ಇಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿಯಿದೆ.
Orange peel tea: ಕಿತ್ತಳೆ ಸಿಪ್ಪೆಯ ಚಹಾ ಮಾಡುವ ವಿಧಾನ ಮತ್ತು ಅದರ ಪ್ರಯೋಜನಗಳು ಇಲ್ಲಿದೆ..!
2021 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೂರಜ್ ರೇವಣ್ಣ ತಮ್ಮ ಪತ್ನಿ ಹೆಸರು ಬರೆಯದೇ ಇದ್ದಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಆಗಲೇ ಪತಿ-ಪತ್ನಿ ಬೇರೆಯಾಗಿದ್ದರು ಎನ್ನಲಾಗಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಸುದ್ದಿಯಿದೆ.
ಆದರೆ ಅವರ ವಿಚ್ಛೇದನಕ್ಕೆ ಸೂರಜ್ ರ ಅಸಹಜ ಲೈಂಗಿಕ ಚಟವೇ ಕಾರಣವಾಯ್ತಾ ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸೂರಜ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಡಿಸಿದ್ದ ಯುವಕ ಅಮವಾಸ್ಯೆ ಬಂದರೆ ಸೂರಜ್ ಸೀರೆ, ಬಳೆ ತೊಟ್ಟು ವಿಚಿತ್ರವಾಗಿ ಆಡುತ್ತಾರೆ ಎಂದು ಆಪಾದಿಸಿದ್ದ. ಸೂರಜ್ ರ ವಿಚಿತ್ರ ನಡವಳಿಕೆಯಿಂದಲೇ ಪತಿ-ಪತ್ನಿ ಸಂಬಂಧ ಮುರಿದುಬಿದ್ದಿರಬಹುದು ಎಂದು ಚರ್ಚೆಯಾಗುತ್ತಿದೆ.
ಸೂರಜ್ ವಿರುದ್ಧದ ದೂರಿನಲ್ಲೇನಿದೆ?
ಅರಕಲಗೂಡು ಮೂಲದ ಯುವಕ ನೀಡಿದ 14 ಪುಟದ ದೂರಿನಲ್ಲಿ ಗಂಭೀರವಾದ ಆರೋಪಗಳನ್ನು ಸೂರಜ್ ರೇವಣ್ಣ ಮೇಲೆ ಮಾಡಿದ್ದಾರೆ. ಸೂರಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ, ಗೃಹಸಚಿವರು, ಡಿಐಜಿ ಕಚೇರಿ ಹಾಗೂ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸೂರಜ್ ಹಾಗೂ ನನಗೂ ಪರಿಚಯ ಆಯ್ತು,
ಆಗ ನನ್ನ ಮೊಬೈಲ್ ನಂಬರನ್ನು ತೆಗೆದುಕೊಂಡು ವಾಟ್ಸಾಪ್ ನಲ್ಲಿ ಚಾಟಿಂಗ್ ಮಾಡ್ತಾ ಇದ್ರು. ಪ್ರತಿ ಬಾರಿ ಮೆಸೇಜ್ ಮಾಡಿದಾಗಲೂ ಹಾರ್ಟ್ ಸಿಂಬಲ್ ಸೇರಿಸಿ ಸೂರಜ್ ಮೆಸೇಜ್ ಕಳಿಸ್ತಾ ಇದ್ದರು ಅಂತಾ ದೂರಿಲ್ಲಿ ಉಲ್ಲೇಖಿಸಿದ್ದಾರೆ.ಕಳೆದ ಭಾನುವಾರ ಜೂನ್ 16 ರಂದು ಮಾತನಾಡೋ ಸಲುವಾಗಿ ಗನ್ನಿಕಡ ತೋಟಕ್ಕೆ ಕರೆಸಿಕೊಂಡ ಸೂರಜ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ, ಸುದೀರ್ಘ ದೂರಿನಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯ ವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರೊ ಸಂತ್ರಸ್ತ, ವೀಡಿಯೋ ಹೇಳಿಕೆ ಬಿಡುಗಡೆ ಮಾಡೋ ಮೂಲಕವೂ ತನ್ನ ಮೇಲೆ ನಡೆದ ಅಮಾನುಷ ದೌರ್ಜನ್ಯ ವಿವರಿಸಿದ್ದಾರೆ.