ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಜೈಲು ಸೇರಿದ್ದರು. 11 ದಿನಗಳ ಸೆರೆವಾಸದ ಬಳಿಕ ಏ.6ರಂದು ಜೈಲಿಂದ ಹೊರ ಬಂದ ಬಳಿಕ ಸೋನು ಕುಟುಂಬದವರ ಜೊತೆ ಸೇರಿ ಯುಗಾದಿ ಹಬ್ಬ ಆಚರಿಸಿದ್ದಾರೆ.
ಪಿಂಕ್ ಬಣ್ಣ ಸೀರೆಯುಟ್ಟು ಸೋನು ಗೌಡ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಯುಗಾದ ಹಬ್ಬದ ಸಂಭ್ರಮದ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೈಲಿಂದ ರಿಲೀಸ್ ಆದ ಬಳಿಕ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಸೋನು ನಿರಾಕರಿಸಿದ್ದರು. ಆದರೆ ಅವರ ಲಾಯರ್ ಸೂಚನೆಯ ಮೇರೆಗೆ ಸೋನು ಯಾವುದೇ ರಿಯಾಕ್ಷನ್ ನೀಡಿರಲಿಲ್ಲ. ಸದ್ಯ ಕಹಿಯೆಲ್ಲಾ ಮರೆತಿರೋ ಸೋನು ಯುಗಾದಿ ಹಬ್ಬವನ್ನು ಚಂದವಾಗಿ ಆಚರಿಸಿದ್ದಾರೆ.
ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಿದ್ದ ಸೋನು ಜೈಲಿಗೆ ಹೋಗಿ ಬಂದ ಬಳಿಕ ಸಖತ್ ಸೈಲೆಂಟ್ ಆಗಿದ್ದಾರೆ. ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಿಂದ ಸೋನು ಮೌನಕ್ಕೆ ಶರಣಾಗಿದ್ದರು. ಇದೀಗ ಮತ್ತೆ ಲವಲವಿಕೆಯಿಂದ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.