ಬೆಂಗಳೂರು: ಮಗು ದತ್ತು ಪಡೆದ ಕೇಸ್ನಲ್ಲಿ ರೀಲ್ಸ್ ರಾಣಿ ಸೋನು ಗೌಡ ಜೈಲು ಸೇರಿದ್ದಾಳೆ.. 4 ದಿನದ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಸೋನು ಶ್ರೀನಿವಾಸ್ ಗೌಡಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಅಕ್ರಮವಾಗಿ ಮಗುದತ್ತು ಪಡೆದಿರೋ ಆರೋಪ ಎದುರಿಸ್ತಿರೋ ಸೋನು ಶ್ರೀನಿವಾಸ್ ಗೌಡಗೆ ಕಾನೂನು ಮತ್ತಷ್ಟು ಬಿಗಿಯಾಗಿದೆ. ಪ್ರಕರಣ ಸಂಬಂಧ 4 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಸೋನುಗೌಡಗೆ ಈಗ 14 ದಿನ ನ್ಯಾಯಾಂಗ ಬಂಧನ ಎದುರಾಗಿದೆ. ಇದ್ರಿಂದ ಸೋನು ಶ್ರೀನಿವಾಸ್ ಗೌಡ ಜೈಲು ಸೇರಿದ್ದಾಳೆ.
Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
ರಾಯಚೂರು ಮೂಲದ ಮಗುವನ್ನ ಅಕ್ರಮವಾಗಿ ದತ್ತು ಪಡೆದಿರೋ ಆರೋಪದ ಮೇಲೆ ಕಳೆದ ಶುಕ್ರವಾರ ಸೋನುಗೌಡ ಅರೆಸ್ಟ್ ಆಗಿದ್ಲು.. ಬಳಿಕ ವಿಚಾರಣೆ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನ 4 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ರು. ಸದ್ಯ ಸೋನುಗೌಡ ಹಾಗು ಮಗುವಿನ ತಂದೆ ತಾಯಿಯ ಸ್ಟೇಟ್ ಮೆಂಟ್ ಪಡೆದಿರೋ ಪೊಲೀಸರು ರಾಯಚೂರಿಗೂ ತೆರಳಿ ಮಗುವಿನ ಮನೆಯಲ್ಲಿ ಸ್ಪಾಟ್ ಮಹಜರ್ ಮಾಡಿ ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೊಂದು ಕಡೆ ಇಂದಿಗೆ ಸೋನುಗೌಡ ಕಸ್ಟಡಿ ಅಂತ್ಯವಾದ ಹಿನ್ನೆಲೆ ಮತ್ತೆ ಆಕೆಯನ್ನ ಕೋರ್ಟ್ ಮುಂದೆ ಹಾಜರು ಪಡಿಸಲಾಯ್ತು. ಬಳಿಕ ನ್ಯಾಯಾಧೀಶರು ಸೋನುಗೌಡಳನ್ನ ಏ.8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ರು.
ಸದ್ಯ ರೀಲ್ಸ್ ಮಾಡ್ಕೊಂಡು ಆರಾಮಾಗಿದ್ದ ಸೋನುಗೌಡ ಮಗುವಿನ ವಿಚಾರದಲ್ಲಿ ತಗ್ಲಾಕೊಂಡು ಪರಪ್ಪನ ಅಗ್ರಹಾರ ಸೇರಿದ್ದಾಳೆ. ನಾಳೆ ಸೋನುಗೌಡ ಪರ ವಕೀಲರು ಜಾಮೀನು ಕೋರಿ ಕೋರ್ಟ್ ಮೊರೆ ಹೋಗಲಿದ್ದು, ಬೇಲ್ ಸಿಗುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.