ಬೆಂಗಳೂರು: ಮಗುವನ್ನು ದತ್ತು ಪಡೆಯುವಾಗ ಪಾಲಿಸಬೇಕಾದ ನಿಯಮಗಳ ಪಾಲನೆ ಉಲ್ಲಂಘನೆ (Adoption Procedure) ಮಾಡಿದ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ ಗೌಡ (Sonu Srinivas Gowda) ಅವರನ್ನು ಬಂಧಿಸಲಾಗಿದೆ.
ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟುಕೊಂಡ ಆರೋಪದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಈ ರೀತಿ ದತ್ತು ಪಡೆಯಲು ಅದರದ್ದೇ ಆದ ನಿಯಮಗಳು ಇರುತ್ತವೆ. ಆದರೆ, ಇದನ್ನು ಸೋನು ಶ್ರೀನಿವಾಸ ಗೌಡ ಗಾಳಿಗೆ ತೂರಿದ್ದಾರೆ. ಮತ್ತೊಂದೆಡೆ ಅವಳ ಜೊತೆ ಕಂಟೆಂಟ್ಗಳನ್ನು ಮಾಡಿ ಯೂಟ್ಯೂಬ್ಗೆ ವಿಡಿಯೋಗಳನ್ನು ಸೋನು ಹಾಕುತ್ತಿದ್ದರು. ಇದು ಕಾನೂನು ಬಾಹಿರ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಹೇಳಿದ್ದಾರೆ. ‘ಮಗು ಅಂದ್ರೆ ದುಡ್ಡು ಮಾಡೋ ವಸ್ತು ಅಲ್ಲ’ ಎಂದು ಅವರು ತಿಳಿಸಿದ್ದಾರೆ.