ಆನೇಕಲ್:- ತಾಯಿ ಕೊಂದವನ ಮೇಲೆ ಮಗನಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಸಮಂದೂರಿನಲ್ಲಿ ಜರುಗಿದೆಷಯಯಚ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರಿನಲ್ಲಿ ಜರುಗಿದೆ.
ನಾರಾಯಣಪ್ಪ(52) ಹಲ್ಲೆಗೊಳಗಾದ ವ್ಯಕ್ತಿ. ಮಧು (37) ಹಲ್ಲೆ ಮಾಡಿ ಪರಾರಿಯಾದ ಆರೋಪಿ ಎನ್ನಲಾಗಿದೆ. ನಿನ್ನೆ ಸಂಜೆ ಕುಡಿದು ಅವಾಚ್ಯ ಶಬ್ದಗಳಿಂದ ನಾರಾಯಣಪ್ಪ ನಿಂದನೆ ಮಾಡಿದ್ದ. ಆರೋಪಿ ಮಧು ಮನೆ ಬಳಿ ತೆರಳಿ ಅವಾಜ್ ಹಾಕಿದ್ದ.ಈ ವೇಳೆ ಮಧು ಮತ್ತು ನಾರಾಯಣಪ್ಪ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆ ನಡೆದಿದೆ.
ನಾರಾಯಪ್ಪ ತಲೆ ಮೇಲೆ ಮಧು ಕಲ್ಲನ್ನ ಎತ್ತಿ ಹಾಕಿದ್ದು, ಗಂಭೀರವಾಗಿ ಗಾಯಗೊಂಡ ನಾರಾಯಣಪ್ಪ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಆರು ವರ್ಷದ ಹಿಂದೆ ಆರೋಪಿ ಮಧು ತಾಯಿಯನ್ನು ನಾರಾಯಣಪ್ಪ ಕೊಂದಿದ್ದ. ಮೂರು ವರ್ಷದ ಹಿಂದೆ ಜೈಲಿನಿಂದ ರಿಲೀಸ್ ಆಗಿದ್ದ. ನಿನ್ನೆ ಸಂಜೆ 6:30 ರ ಸುಮಾರಿಗೆ ಸೈಜು ಕಲ್ಲು ಎತ್ತಿ ಹಾಕಿ ಹಲ್ಲೆ ನಡೆದಿದೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.