ಬೆಳಗಾವಿ:- ಏ ನಿನಗೆ ಹೆಂಡತಿ ಇಲ್ಲವೇನೋ ಮಗನೇ! ಹೀಗಂತ ಬಿಜೆಪಿ MLC ಸಿಟಿ ರವಿ ಅವರ ವಿರುದ್ಧ ಸುರ್ವಣಸೌಧದಲ್ಲಿ “ಕೈ” ಮುಖಂಡರು ಏಕವಚನದಲ್ಲೇ ನಿಂದನೆ ಮಾಡಿದ್ದಾರೆ.
ಬೆಳಗಾವಿ ಸುರ್ವಣಸೌಧದಲ್ಲಿ ಪರಿಷತ್ತಿನ ಅಧಿವೇಶನದ ಒಳಗಡೆ ಕಾಂಗ್ರೆಸ್ ಎಂಎಲ್ಸಿ ಗಳ ಗುಂಡಾ ವರ್ತನೆ ತೋರಿದ್ದಾರೆ. ವಿಧಾನ ಪರಿಷತ್ ನಲ್ಲಿ ಸಿಟಿ ರವಿ ಅವರಿಗೆ ಅವಾಚ್ಯ ಶಬ್ದಗಳಿಂದ ಕಾಂಗ್ರೆಸ್ ಸದಸ್ಯರು ನಿಂದನೆ ಮಾಡಿದ್ದಾರೆ.
ಹೆಬ್ಬಾಳ್ಕರ್, ಸಿಟಿ ರವಿ ಅವರಿಗೆ ಏಕವಚನದಲ್ಲಿಯೇ ನಿಂದನೆ ಮಾಡಿದ್ದಾರೆ. ಏ ನಿನ್ನಗೆ ತಾಯಿ ಇಲ್ಲವೇನೋ, ಮಗಳು ಇಲ್ಲವೇನೋ, ಹೆಂಡತಿ ಇಲ್ಲವೇನೋ ಎಂದು ಏಕವಚನದಲ್ಲಿ ಕಾಂಗ್ರೆಸ್ ಸದಸ್ಯರು ಗುಂಡ ವರ್ಧನೆ ಮಾಡಿದ್ದಾರೆ.