ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ತಾನು ಟ್ರಿಪ್ಗೆ ಹೋಗಿದ್ದ ಹಿಂದಿರುಗುವಷ್ಟರಲ್ಲಿ ಅನ್ನ, ನೀರಿಲ್ಲದೆ ತಾಯಿ ಸಾವನ್ನಪ್ಪಿರುವ ಮನಕಲಕುವ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಭೋಪಾಲ್ನ ನಿಶಾತ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಲಲಿತಾ ದುಬೆ ಎಂಬ ಮಹಿಳೆ ತನ್ನ ಮಗ ಅರುಣ್ನೊಂದಿಗೆ ವಾಸಿಸುತ್ತಿದ್ದರು. ಲಲಿತಾ ದುಬೆಯನ್ನು ಮನೆಯೊಳಗೆ ಕೂಡಿ ಹಾಕಿ ಅರುಣ್ ತನ್ನ ಪತ್ನಿಯೊಂದಿಗೆ ಉಜ್ಜಯಿನಿಯ ಮನೆಗೆ ಹೋಗಿದ್ದ. ಬಳಿಕ ಅರುಣ್ ಇಂದೋರ್ನಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಫ್ಯಾಮಿಲಿ ಸಮೇತ ಉಜ್ಜಿಯಿನಿಗೆ ಹೋಗುತ್ತಿರುವುದಾಗಿ ತಿಳಿಸಿದ್ದ.
ಕೆಲವು ದಿನಗಳ ಬಳಿಕ ಮತ್ತೊಬ್ಬ ಮಗ ಅಜಯ್ ದುಬೆಗೆ ಅನುಮಾನ ಬಂದು ಒಮ್ಮೆ ಮನೆಯ ಹತ್ತಿರ ಹೋಗಿ ಅಮ್ಮ ಇದ್ದಾರಾ ನೋಡು ಎಂದು ಹೇಳಿ ಸ್ನೇಹಿತರೊಬ್ಬರನ್ನು ಕಳುಹಿಸಿದ್ದರು. ಆದರೆ ಸ್ನೇಹಿತ ಮನೆಗೆ ತಲುಪುವಷ್ಟರಲ್ಲಿ ಅವರು ಶವವಾಗಿದ್ದರು. ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ತಂಡ ಸ್ಥಳಕ್ಕೆ ಬಂದಿತ್ತು, ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.