ರಾಯಚೂರು: ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ಡಿ ವಜ್ಜಲ್ ಅವರಿಗೆ ಪುತ್ರ ವಿಯೋಗವಾಗಿದೆ. ಶಾಸಕರ ದ್ವಿತೀಯ ಪುತ್ರ ಶ್ರೀಮಂತರಾಯ ವಜ್ಜಲ್ (33) ಅವರು ಹೃದಯಘಾತದಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶ್ರೀಮಂತರಾಯ ಮೃತದೇಹವನ್ನು ಲಿಂಗಸುಗೂರಿಗೆ ರವಾನೆ ಮಾಡಲಾಗುತ್ತಿದೆ. ಲಿಂಗಸುಗೂರಿನಲ್ಲಿ ಇಂದು ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಶಾಸಕರ ಜಮೀನಿನಲ್ಲಿ ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ. ಶ್ರೀಮಂತರಾಯ ವಜ್ಜಲ್ ನಿಧನಕ್ಕೆ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ. ಮೃತರಿಗೆ ಪುತ್ರ, ಪತ್ನಿ, ಸಹೋದರರ ಬಳಗವಿದೆ. ಇಂದು ಲಿಂಗಸೂರಿನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅಂತ್ಯಕ್ರೀಯೆ ನಡೆಸಲಾಗುತ್ತದೆ.