ನವದೆಹಲಿ: ಕೆಲ ಸ್ವಾಮೀಜಿಗಳು ದುಡ್ಡಿನಾಸೆಗಾಗಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿಎಸ್ವೈ ಪರವಾಗಿಲ್ಲ. ಅವರು ಆ ಗೌರವ ಉಳಿಸಿಕೊಂಡಿಲ್ಲ.
ವಿಜಯೇಂದ್ರನನ್ನು ಅಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧವಿದೆ. ಇಬ್ಬರು, ಮೂವರು ಪೇಮೆಂಟ್ ಸ್ವಾಮಿಗಳು ಅವರ ಜೊತೆಗಿದ್ದಾರೆ ಅಷ್ಟೇ. ವಿಜಯೇಂದ್ರ ಬಿಎಸ್ವೈ ಅವರು ನಕಲಿ ಸಹಿ ಮಾಡಿದ್ದಾರೆ. ಆದರೆ ಈ ಕುರಿತು ಸಿದ್ದರಾಮಯ್ಯ ಅವರಿಗೆ ತನಿಖೆ ಮಾಡಲು ಏನು ಕಷ್ಟ. ಎಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ವಿಜಯೇಂದ್ರ ಕರ್ಮಕಾಂಡ, ಹಲ್ಕಾ ಕೆಲಸ ಬಹಳ ಇದೆ ಎಂದು ವಾಗ್ದಾಳಿ ನಡೆಸಿದರು.
Railway Jobs: SSLC, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ..! ಮಾಸಿಕ ವೇತನ ₹ 20,000
ದುಡ್ಡಿನ ಅಹಂಕಾರದಿಂದ ಎಲ್ಲರನ್ನು ಖರೀದಿ ಮಾಡಬಹುದು ಅಂದುಕೊಂಡಿದ್ದಾರೆ. ಎಲ್ಲರನ್ನು ಎಲ್ಲ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ, ನಿನ್ನ ಬಳಿ ದುಡ್ಡು ಇರಬಹುದು, ಚಾರಿತ್ರ್ಯ ಇಲ್ಲ. ನಾನು ಅಧ್ಯಕ್ಷನಾಗಲು ಪ್ರಯತ್ನ ಮಾಡುತ್ತಿಲ್ಲ. ಯಾವುದೇ ಸಮುದಾಯದ ನಾಯಕರು ಅಧ್ಯಕ್ಷರಾಗಬಹುದು. ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೆ, ಅವರು ಹೇಳಿದ ತಕ್ಷಣ ನಿಮಗೆ ತಿಳಿಸುತ್ತೇವೆ. ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಹೈಕಮಾಂಡ್ ನಿರ್ಧಾರ ಬದಲಾವಣೆ ಮಾಡಿದ್ದರೆ ಮುಂದೆ ಏನು ಮಾಡುತ್ತೇವೆ ಎನ್ನುವ ಕುರಿತು ಹೇಳುತ್ತೇನೆ ಎಂದು ಹೇಳಿದರು.