ಬೆಂಗಳೂರು: ನೀರಿನ ಅಭಾವವು ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣದಿಂದ ಬೆಂಗಳೂರು ಹೋಟೆಲ್ ಗಳು ಹೊಸದೊಂದು ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಗ್ರಾಹಕರಿಗೆ ಬಂದ ಕೂಡಲೇ ನೀರು ಕೊಡುವ ಸಂಪ್ರದಾಯಕ್ಕೆ ತಿಲಾಂಜಲಿ ಇಡಲಾಗುತ್ತಿದ್ದು, ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ತಿಂಡಿ ಸರಬರಾಜು ಮಾಡಲು ನಿರ್ಧರಿಸಿದೆ.
ಈ ಹಿಂದೆ ಗ್ರಾಹಕರು ಬಂದು ಕುಳಿತ ತಕ್ಷಣ ವೇಟರ್ ನೀರು ತಂದು ಇಡುತ್ತಿದ್ದರು. ಹೋಟೆಲ್ಗೆ ಬರುವ ಗ್ರಾಹಕರಿಗೆಲ್ಲ ಲೋಟದಲ್ಲಿ ನೀರು ಇಡಲಾಗುತ್ತಿತ್ತು. ಆದರೆ ನೀರಿನ ಅಭಾವ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.. ಹೋಟೆಲ್ ಮಾಲೀಕರು ಇದೀಗ ಜಲ ಸಂರಕ್ಷಣೆ ಮಾಡಲು ಅಭಿಯಾನ ಶುರು ಮಾಡಿದ್ದಾರೆ..
Bigg News : ಲೋಕಸಭಾ ಚುನಾವಣೆ : ಮಾರ್ಚ್ 15ರಿಂದ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ
ಸಾಮಾನ್ಯವಾಗಿ ಎಲ್ಲಾ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಬರುವ ಮುಂಚಿನೇ ಗ್ಲಾಸ್ ನಲ್ಲಿ ನೀರಿಟ್ಟು ಬರ ಮಾಡಿಕೊಳ್ತಿದ್ರು.. ಆದ್ರೆ ಇದೀಗ ಜಲಕ್ಷಾಮ ಇರೋದ್ರಿಂದ ಈ ತರಹ ಮಾಡುವುದರಿಂದ ನೀವು ವ್ಯರ್ಥವಾಗುತ್ತೆ ಎಂದು ಮತ್ತೊಂದು ಮಹತ್ವದ ಹೆಜ್ಜೆ ಹೋಟೆಲ್ ಸಂಘದಿಂದ ತೆಗೆದುಕೊಂಡಿದ್ದಾರೆ.. ಈ ರೀತಿಯಲ್ಲಿ ನೀರು ಇಡುವುದರಿಂದ ವ್ಯರ್ಥವಾಗುತ್ತಿದೆ. ಕೆಲ ಗ್ರಾಹಕರು ನೀರು ಕುಡಿಯುವುದೇ ಇಲ್ಲ. ಹೀಗಾಗಿ ಗ್ರಾಹಕರು ಬಂದೊಡನೆ ಖಾಲಿ ಗ್ಲಾಸ್ ಇಟ್ಟು, ಜಗ್ನಲ್ಲಿ ನೀರು ಇಡುವುದು ಸೂಕ್ತ ಎಂದು ಎನ್ನುತ್ತಾರೆ ಮಾಲೀಕರು.
ಇದರ ಜೊತೆಗೆ ನೀರಿನ ಅಭಾವ ತೂಗಿಸಲು ಕೆಲಕಾಲ ಪ್ಲಾಸ್ಟಿಕ್ ಲೋಟ, ತಟ್ಟೆಗಳನ್ನ ಬಳಸಲು ಸೂಚನೆ ನೀಡಲಾಗಿದ್ದು, ನೀರಿನ ಅಭಾವದ ಬಗ್ಗೆ ಹೋಟೆಲ್ ಕೆಲಸಗಾರರು ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪಿಸಿ ಮೋಹನ್ ತಿಳಿಸಿದ್ದಾರೆ..
ಒಟ್ಟಾರೆ ಜಲಕ್ಷಾಮ ಕೇವಲ ಜನರಿಗಷ್ಟೇ ಅಲ್ಲದೆ ಹೋಟೆಲ್ ಗಳಲ್ಲಿ ಕೂಡ ತಟ್ಟಿದೆ.. ಇನ್ನು ಬೇಸಿಗೆ ಆರಂಭವಷ್ಟೇ ಈಗಲೇ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಮಾರ್ಚ್ ಯಿಂದ ಮೇ ವರೆಗೂ ನೀರಿನ ಅಭಾವ ಪೀಕ್ ನಲ್ಲಿ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.. ಇದರ ನಡುವೆ ಹೋಟೆಲ್ ಗಳ ಮೇಲೆ ಮತ್ತಷ್ಟು ಜಲ ಪ್ರಬಾವ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ..