ರಾಯಚೂರು: ರಾಷ್ಟ್ರೀಯ ಫಸಲ್ ಬಿಮಾ ಯೋಜನೆಯಡಿ ಬೇರೆಯವರ ಖಾತೆಗೆ ಜಮಾ ಆಗಿರುವ ಪ್ರಕರಣ ಈಗಾಗಲೇ ಸಿಐಡಿಗೆ ವಹಿಸಲಾಗಿದೆ. ತಪ್ಪಾಗಿ ರೈತರ ಖಾತೆ ಜಮಾ ಮಾಡಿರುವದು ವಿಮಾ ಕಂಪನಿಗಳೇ ಹೊಣೆಯಾಗಬೇಕಾಗುತ್ತದೆ. ಆದರೆ ಯಾವುದೇ ತೊಂದರೆಯಾಗಲು ಸರಕಾರ ಬಿಡುವುದಿಲ್ಲ ಎಂದು ಕೃಷಿ ಸಚಿವ ಎಸ್.ಚಲುವನಾರಯಣ ಸ್ವಾಮಿ ಅವರು ಭರವಸೆ ನೀಡಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವರ್ಷದಿಂದ ರಾಷ್ಟ್ರೀಯ ಫಸಲ್ ಭೀಮಾ ಯೋಜನೆಯನ್ನು ಒಂದು ವರ್ಷಕ್ಕೆ ಸೀಮಿತವಾಗಿ ವಿಮಾ ಯೋಜನೆ ರೂಪಿಸಲು ಬದಲಾವಣೆ ತರಲಾಗುತ್ತದೆ. ಮುಂದಿನ ವರ್ಷದಿಂದ ಫಸಲ್ ಭೀಮಾ ಯೋಜನೆ ಪರಿಣಾಮಕಾರಿ ಜಾರಿಗೆ ಕ್ರಮ ವಹಿಸಲಾಗುತ್ತದೆ ಎಂದರು.
https://ainlivenews.com/supreme-ray-healing-centre-reiki-treatment/
ಮುಂಗಾರು ಮತ್ತು ಹಿಂಗಾರಿಗೆ ಪ್ರತ್ಯೇಕ ಪರಿಹಾರ ನೀಡುವ ಕುರಿತಂತೆ ನ 9ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಅಧ್ಯಯನ ತಂಡ ಬಂದು ಹೋದರೂ ಕೇಂದ್ರ ಸರಕಾರ ಬರ ಪರಿಹಾರ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ನೆರವಿನ ಹಣ ಬಿಡುಗಡೆ ಮಾಡಿದಲ್ಲಿ ರಾಜ್ಯ ಸರಕಾರವು ಸೇರಿ ಪರಿಹಾರ ವಿತರಿಸುವ ಕುರಿತು ನಿರ್ಧರಿಸಲಾಗುತ್ತದೆ.