ಬಳ್ಳಾರಿ: ಬಜೆಟ್ ನಲ್ಲಿ ಹಿಂದೂಗಳಿಗೆ ಅನ್ಯಾಯ ಅಂತಾ ವಿರೋಧಿಸಿ ಬಳ್ಳಾರಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ನಾಲಿಗೆ ಹರಿಬಿಟ್ಟ ವಿಡಿಯೋ ವೈರಲ್ ಆಗಿದೆ.
ಸಿದ್ದರಾಮಯ್ಯನವರು ಸಾಬ್ರು ಕಾ ಸಾಥ್ ಸಾಥ್, ಸಾಬ್ರು ಕಾ ವಿಕಾಸ್ ಅಂತಾ ಹೇಳ್ತಾ ಇದ್ದಾರೆ. ನಮಗೆಲ್ಲ ಅನ್ಯಾಯ ಮಾಡಿ ಅವರಿಗಷ್ಟೇ ನ್ಯಾಯ ಮಾಡಬೇಕು ಅಂತಾ ಈ ರೀತಿ ಮಾಡಿದ್ದಾರೆ. ಯಾಕಂದ್ರೆ ಅಲ್ಪ ಸಂಖ್ಯಾತರು ಮಾತ್ರ ಅವರಿಗೆ ವೋಟ್ ಹಾಕಿದ್ದಾರೆ ಅಂತಾ ನಮ್ಮವರಿಗೆಲ್ಲ ಅನ್ಯಾಯ ಮಾಡ್ತಾರೆ. ಇದನ್ನೆಲ್ಲಾ ನೋಡಿದ್ರೆ ಇದು ಪಿಕ್ ಪಾಕೆಟ್ ಬಜೆಟ್ ಅನ್ನಿಸುತ್ತೆ. ಯಾಕಂದ್ರೆ ಮೆಜಾರಿಟಿ ಹಿಂದೂಗಳ ಜೋಬಿಗೆ ಕೈ ಹಾಕಿ, ಮುಸ್ಲೀಮಗೆ ಜಾಸ್ತಿ ಕೊಡಬೇಕು ಅಂತಾ ಸರ್ಕಾರ ಪ್ಲಾನ್ ಮಾಡ್ತಾ ಇದೆ. ಸಿದ್ದರಾಮಯ್ಯ ನವರು ಮೊದಲಿಂದನೂ, ಪ್ರತಿ ಹೆಜ್ಜೆಗೂ ಸಾಬ್ರಿಗೆ ಜಾಸ್ತಿ ಮನ್ನಣೆ ಕೊಡ್ತಾ ಇದ್ದಾರೆ. ಹೀಗಾಗಿ ನಮ್ಮ ಹಿಂದೂಗಳೆಲ್ಲ ಒಗ್ಗಟ್ಟಾಗಿ ಈ ಸರ್ಕಾರವನ್ನ ಕಿತ್ತೆಸೆಯಬೇಕು ಎಂದಿದ್ದಾರೆ ರೆಡ್ಡಿಗಾರು.
ನಮಗೆಲ್ಲಾ ಚಿಪ್ಪು ಕೊಟ್ಟ ಸರ್ಕಾರಕ್ಕೆ ವೋಟ್ ಹಾಕುವಾಗ ಚಿಪ್ ಕೊಡಬೇಕು ಎಂದು ಸೋಮಶೇಖರ ರೆಡ್ಡಿ ಕರೆ ನೀಡಿದ್ದಾರೆ.