ಪೀಣ್ಯ ದಾಸರಹಳ್ಳಿ:’ ನೀರಿನ ಅಭಾವ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಕೊಳವೆಬಾವಿ ಕೊರೆಸಿ ನೀರು ನೀಡಲಾಗುತ್ತಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಮಲ್ಲಸಂದ್ರದ ಬಿ.ಎಚ್.ಇ.ಎಲ್ ಮಿನಿ ಕಾಲೋನಿಯಲ್ಲಿ ಕೊಳವೆಬಾವಿ ನೀರಿನ ಪೂರೈಕೆಗೆ ಚಾಲನೆ ನೀಡಿ ಮಾತನಾಡಿದರು.
ಮಲ್ಲಸಂದ್ರದ ಮುನೇಶ್ವರ ಬಡಾವಣೆ ಬಿಎಚ್ಇಎಲ್ ಮಿನಿ ಕಾಲೋನಿ ಪೈಪ್ಲೈನ್ ರಸ್ತೆ ಸುತ್ತಮುತ್ತಲ ಪ್ರದೇಶದ ಜನರಿಗೆ ನೀರಿನ ಸಮರ್ಪಕ ಪೂರೈಕೆ ಆಗದ ಕಾರಣ ನೀರಿನ ಹಾಹಾಕಾರವಾಗಿತ್ತು. ದಿನನಿತ್ಯ ನೂರಾರು ದೂರುಗಳು ಬರುತ್ತಿದ್ದವು. ಹೀಗಿರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕಾವೇರಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಅದರಿಂದ ನೀರಿನ ಸಮಸ್ಯೆ ಜಾಸ್ತಿಯಾಗಿತ್ತು. ಈಗ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ, ಈ ಭಾಗದ ಜನರಿಗೆ ಸ್ವಲ್ಪಮಟ್ಟಿಗೆ ಆದರೂ ಸಮಸ್ಯೆ ಬಗೆಹರಿಯಲಿದೆ’ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಟಿ. ಶಿವಕುಮಾರ್, ಹುಚ್ಚ ರಂಗಯ್ಯ, ಎಂ. ಆನಂದ್, ಗಂಧದಗುಡಿ ನಾಗಣ್ಣ, ಗಂಗರಾಜು, ಪಾಂಡುರಂಗರಾವ್, ಕೆಂಪೇಗೌಡ ಸುರೇಶ್, ಗಂಗಾಧರ್, ಉದ್ಯಮಿ ತಿಮ್ಮೇಗೌಡ, ಮಹಿಳಾ ಮುಖಂಡರಾದ ಪಾರ್ವತಿ, ನಯನ ಮತ್ತು ಸ್ಥಳೀಯರಿದ್ದರು .