ಬೆಂಗಳೂರು: ಸತತ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಹಿನ್ನೆಡೆ ಆಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ 3ನೇ ಬಾರಿ ವಿಫಲರಾಗಿದ್ದಾರೆ. ಈ ಪ್ರತಿಷ್ಠೆಯ ರಾಜಕೀಯ ಆಟದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೈ ಮೇಲಾಗಿದೆ. ಸ್ವಂತ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಲಾಗದೇ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮುಜುಗರ ಅನುಭವಿಸಿದ್ದಾರೆ.
IPL ಮೆಗಾ ಹರಾಜಿಗೆ ಕೌಂಟ್ ಡೌನ್: RCB ಗುರಿಯಿಟ್ಟ ಸ್ಟಾರ್ ಆಟಗಾರರು ಇವರೇ!
ದೇವೇಗೌಡರು ನಿರಂತರ 10 ದಿನ ಪ್ರಚಾರ ನಡೆಸಿ ಅಬ್ಬರಿಸಿದರೂ, ಬಿಜೆಪಿ ನಾಯಕರು ಬಂದು ಸಂಘಟಿತವಾಗಿ ಪ್ರಚಾರ ನಡೆಸಿದ್ರೂ, ಅದು ನಿಖಿಲ್ಗೆ ಗೆಲುವು ತಂದುಕೊಡಲಿಲ್ಲ. ಮತ ಎಣಿಕೆಯ ಮೊದಲ ಸುತ್ತಲ್ಲಿ ಕಾಂಗ್ರೆಸ್ ಅಲ್ಪಮತಗಳ ಮುನ್ನಡೆ ಸಿಕ್ಕಿತ್ತು. ನಂತರದ 4 ಸುತ್ತುಗಳಲ್ಲಿ ನಿಖಿಲ್ ಮುನ್ನಡೆ ಸಿಕ್ಕಿದರೂ ಹೀಗೆ ಮುಂದುವರೆಯಲಿಲ್ಲ. ಆರನೇ ಸುತ್ತಿನಿಂದ ಆರಂಭವಾದ ಯೋಗೇಶ್ವರ್ ಜೈತ್ರಯಾತ್ರೆ ಕೊನೆವರೆಗೂ ನಿಲ್ಲಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿದರೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮೌನಕ್ಕೆ ಶರಣಾದ್ರು.
ಚನ್ನಪಟ್ಟಣ ಫಲಿತಾಂಶ
* ಯೋಗೇಶ್ವರ್ – 1,12,642 ಮತ
* ನಿಖಿಲ್ – 87,229 ಮತ
* ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ
* ಯೋಗೇಶ್ವರ್ ಕೈ ಹಿಡಿದ ಮುಸ್ಲಿಂ ಮತ
* ಯೋಗೇಶ್ವರ್ ಕೈ ಹಿಡಿದ `ಪಟ್ಟಣ’ದ ಮತ
* ಒಕ್ಕಲಿಗ ಮತ ವಿಭಜನೆ- ನಿಖಿಲ್ ಸೋಲು
* ಯೋಗೇಶ್ವರ್ ಕೈ ಹಿಡಿದ `ಗೃಹಲಕ್ಷ್ಮಿಯರʼ ʼಶಕ್ತಿ’
* ಸಿಪಿವೈ ವೈಯಕ್ತಿಕ ವರ್ಚಸ್ಸು – 2 ಸೋಲಿನ ಅನುಕಂಪ
* ಬಿಜೆಪಿಯ `ವಕ್ಫ್’ ವಿರೋಧಿ ನೀತಿ-ನಿಖಿಲ್ಗೆ ಹೊಡೆತ
* ಕಾಂಗ್ರೆಸ್ಗೆ ಪ್ಲಸ್ ಆದ ಜಮೀರ್ ವಿವಾದಿತ ಮಾತು
* ಕೈಗೂಡದ ದೇವೇಗೌಡರು- ಹೆಚ್ಡಿಕೆ ರಣತಂತ್ರ
ಎರಡೂವರೆ ವರ್ಷದ ಹಿಂದೆ.. ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ದ ಸೋಲು ಕಂಡಿದ್ದ ಸೈನಿಕ ಯೋಗೇಶ್ವರ್ ಈ ಬಾರಿಯ ಉಪಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಸಿ.ಪಿ.ಯೋಗೇಶ್ವರ್ಗೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವಂತೆ ಎಚ್.ಡಿ.ಕುಮಾರಸ್ವಾಮಿ ಅವರು ಆಫರ್ ಕೂಡ ನೀಡಿದ್ದರು. ಇದಕ್ಕೆ ಕೇಂದ್ರ ನಾಯಕರು ಸಹ ಒಪ್ಪಿಗೆ ಸೂಚಿಸಿದ್ದರು. ಆದರೆ, ಪ್ರತಿಕಾರದ ಜ್ವಾಲೆಯಲ್ಲಿ ಬೇಯುತ್ತಿದ್ದ ಸಿ.ಪಿ.ಯೋಗೇಶ್ವರ್ ಈ ಆಫರ್ ತಿರಸ್ಕರಿಸಿದ್ದರು. ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಆ ನಂತರ ಅದೇನಾಯ್ತೋ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿಪಿವೈ ಘರ್ ವಾಪಸಿ ಮಾಡಿದರು. ತಮ್ಮ ಮಾತೃ ಪಕ್ಷ ಸೇರಿಕೊಂಡಿದ್ದರು. ಕುಮಾರಣ್ಣನ ಕುಮಾರ ಕಂಠೀರವ ನಿಖಿಲ್ ಗೆ ಸವಾಲು ಹಾಕಿ ತೊಡೆ ತಟ್ಟಿದ್ದರು.
ನಿಜಾ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸಹಜ. ಚನ್ನಪಟ್ಟಣದಲ್ಲಿ ಲೋಕಸಭೆ ಚುನಾವಣೆಯಲ್ಲಿ 85 ಸಾವಿರ ಮತಗಳು ಬಂದಿದ್ದವು. ನಾನು ಹಾಗೂ ಕಾಂಗ್ರೆಸ್ ನಾಯಕರು ಚನ್ನಪಟ್ಟಣದಲ್ಲಿ ಸತತವಾಗಿ ಸಂಘಟನೆ ಮಾಡಿದ್ದೇವೆ. ಕ್ಷೇತ್ರದಲ್ಲಿ ನಮ್ಮ ಕಾಲು ಮೇಲೆ ನಿಂತುಕೊಳ್ಳುವ ಶಕ್ತಿ ತಂದು ಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು.
ಇಂಥಾ ಸಿ.ಪಿ.ಯೋಗೇಶ್ವರ್ ಹೆಣೆದ ಚಕ್ರವ್ಯೂಹವನ್ನು ಭೇದಿಸುವಲ್ಲಿ ಈ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಮತದಾರ ಪ್ರಭು ಆದೇಶದ ಮೇರೆಗೆ ಸಿ.ಪಿ.ಯೋಗೇಶ್ವರ್ ಮುಂದೆ ತಲೆ ಬಾಗಿದ್ದಾರೆ. ಈ ಮೂಲಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎರಡೂವರೆ ವರ್ಷದ ಹಿಂದಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಭರ್ಜರಿಯಾಗಿ ಗೆದ್ದು ಬೊಂಬೆ ನಗರಿ ಚನ್ನಪಟ್ಟಣದಲ್ಲಿ ರಣಕೇಕೆಯನ್ನು ಕೂಡ ಕನ್ನಡ ಚಿತ್ರರಂಗದ ಅಂದಕಾಲತ್ತಿಲ್ನ ಸೈನಿಕ ಸಿ.ಪಿ.ಯೋಗೇಶ್ವರ್ ಹಾಕಿದ್ದಾರೆ. ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ 25.413 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ನಗಾರಿ ಬಾರಿಸಿದ್ದಾರೆ.
ಇನ್ನುಳಿದಂತೆ ಈ ಹಿಂದೆ ಮಂಡ್ಯದಲ್ಲೊಮ್ಮೆ, ರಾಮನಗರದಲ್ಲೊಮ್ಮೆ ಸೋಲನ್ನು ಅನುಭವಿಸಿದ್ದ ನಿಖಿಲ್ ಮೂರನೇ ಬಾರಿ ಸೋಲನ್ನು ಕಂಡಿದ್ದಾರೆ. ಸೋಲಿನ ಆತ್ಮವಲೋಕನ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಿಪಿವೈಗೆ ಪ್ರಬಲ ಒಕ್ಕಲಿಗ ಸಮಾಜದ ಬೆಂಬಲ, ಒಕ್ಕಲಿಗ ನಾಯಕರಾದ ಡಿಕೆ ಸಹೋದರರ ಬೆಂಬಲ ಆನೆ ಬಲ ತುಂಬಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ. ಸಿಪಿ ಯೋಗೇಶ್ವರ್ ಪರ ಡಿಕೆ ಸುರೇಶ್- ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಅಬ್ಬರದ ಪ್ರಚಾರ ನಿಖಿಲ್ ಕುಮಾರ ಸ್ವಾಮಿಯನ್ನು ಹಿಂದಿಕ್ಕುವಲ್ಲಿ ಸಹಕಾರಿಯಾಯ್ತು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಇನ್ನೂ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಂತಿಮಕ್ಕೆ ವಿಳಂಬ ಮಾಡಿದ್ದೂ, ಕೊನೇ ಕ್ಷಣದಲ್ಲಿ ಸಿಪಿವೈ ಪಕ್ಷಾಂತರ ಮಾಡುವಂತಾಗಿದ್ದು . ಪ್ರತಿಷ್ಠೆಯಾಗಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿ ನಿಲ್ಲುವಂತಾಗಿದ್ದು, ಎಲ್ಲವನ್ನೂ ಈಗ ಅನೇಕರು ಪರಿಗಣಿಸುತ್ತಿದ್ದಾರೆ. ಚನ್ನಪಟ್ಟಣ ಅಭಿವೃದ್ಧಿಗೆ ಹಲವಾರು ಯೋಜನೆಗಳ ಸರ್ಕಾರ ಘೋಷಣೆ ಮಾಡಿದ್ದು, ಆಡಳಿತ ಪರ ಅಲೆಯಿಂದ ಗೆಲುವಿಗೆ ಪ್ರಬಲ ಬೆಂಬಲವಾಯಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.