ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಕುಖ್ಯಾತ ಮನೆಗಳ್ಳ ಆಪಲ್ ಸಂತೋಷ್ ಹಾಗೂ ರವಿ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ರವಿಕುಮಾರ್ ನನ್ನ ಜೈಲಿನಲ್ಲಿ ಬೇಟಿಯಾಗಿದ್ದ ಆಪಲ್ ಅಶೋಕ್ ನಿನಗೆ ಬೇಲ್ ಕೊಡಿಸುತ್ತಿನಿ ನಿನಗೆ ಏನು ಬೇಕೋ ಎಲ್ಲಾ ನಾನು ನೋಡಿಕೊಳ್ತೀನಿ ಎಂದು ತಲೆಕೆಡಿಸಿದ್ದನು.
Diabetes: ಸಕ್ಕರೆ ಕಾಯಿಲೆ ಕಂಟ್ರೋಲ್’ಗೆ ಬರಬೇಕಾ..? ಹಾಗಾದ್ರೆ ಊಟಕ್ಕೂ ಮೊದಲು ಇದನ್ನು ತಿನ್ನಿ ಸಾಕು.!
ಅಶೋಕ್ ಮಾತು ಕೇಳಿ ಕಳ್ಳತನ ವೃತ್ತಿಯಾಗಿಸಿಕೊಂಡಿದ್ದ ರವಿ ಕುಮಾರ್, ಕದ್ದ ಬೈಕ್ ನಲ್ಲಿ ಮನೆಕಳ್ಳತನ ಮಾಡುತ್ತಿದ್ದನು. ಅದಲ್ಲದೆ ಹುಡುಗೀರ ಶೋಕಿ ಹಾಗೂ ಐಶಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಆಪಲ್ ಅಶೋಕ್, ಕದ್ದ ಹಣದಲ್ಲಿ ಗೋವಾ ಸೇರಿ ಹಲವೆಡೆ ಹುಡುಗಿಯರ ಜೊತೆ ಟ್ರಿಪ್ ಹೊಡೀತಿದ್ದನು. ಸದ್ಯ ಕುಖ್ಯಾತ ಮನೆಗಳ್ಳ ಆಪಲ್ ಸಂತೋಷ್, ರವಿಕುಮಾರ್ರಿಂದ 12 ಲಕ್ಷ ರೂ. ಮೌಲ್ಯದ 30 ಬೈಕ್, 103 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.