ತುಮಕೂರು:- ನೀರಲ್ಲಿ ಸೋಡಿಯಂ ಸ್ಪೋಟ ಕೇಸ್ ಗೆ ಸಂಬಧಪಟ್ಟಂತೆ ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.
ಮುಂದಿನ ವರ್ಷದಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ನಿರೀಕ್ಷೆಯಿದೆ – ಕುಮಾರ್ ಬಂಗಾರಪ್ಪ!
ಕಳೆದ ಮೂರು ದಿನಗಳಿಂದ ಡ್ರೋನ್ ಪ್ರತಾಪ್ನನ್ನು ಮಿಡಿಗೇಶಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭಾನುವಾರ ಇಡೀ ದಿನ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಪೊಲೀಸರು, ಡ್ರೋನ್ ಪ್ರತಾಪ್ ಮನೆ ಕಚೇರಿ ಹಾಗೂ ಸೋಡಿಯಂ ಖರೀದಿಸಿದ್ದ ಅಂಗಡಿಯಲ್ಲಿ ಮಹಜರ್ ಮಾಡಿದ್ದಾರೆ.
ಜೊತೆಗೆ ವಿಡಿಯೋ ಚಿತ್ರಿಕರಿಸಿದ್ದ ಕ್ಯಾಮರಾಮನ್ ವಿನಯ್ ಹಾಗೂ ಸೋಡಿಯಂ ಖರೀದಿಗೆ ಸಹಕಾರ ನೀಡಿದ್ದ ಪ್ರಜ್ವಲ್ನನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಡ್ರೋನ್ ಪ್ರತಾಪ್ನನ್ನು ಪೊಲೀಸರು ಭಾನುವಾರ ಬೆಂಗಳೂರಿನ ಕೊತ್ತನೂರು, ಜೆಪಿನಗರ ಹಾಗೂ ಅವೆನ್ಯೂ ರೋಡ್ಗೆ ಕರೆದುಕೊಂಡು ಹೋಗಿ ಮಹಜರ್ ಮಾಡಿಕೊಂಡು ಬಂದಿದ್ದಾರೆ. ಡ್ರೋನ್ ಪ್ರತಾಪ್ ವಾಸವಿದ್ದ ಮನೆ ಕಚೇರಿ ಹಾಗೂ ಜೆಪಿನಗರದಲ್ಲಿ ಬ್ಲಾಸ್ಟ್ ಬಗ್ಗೆ ಚಿತ್ರೀಕರಿಸಿದ್ದ ಕ್ಯಾಮರಾ ವಶಕ್ಕೆ ಪಡೆದಿದ್ದಾರೆ. ಜೆಪಿ ನಗರದಲ್ಲಿ ಸಂಜು ಎಂಬುವರ ಮನೆಯಲ್ಲಿ ಕ್ಯಾಮರಾ ವಶಕ್ಕೆ ಪಡೆದಿದ್ದಾರೆ.