ತುಮಕೂರು:- ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀಗಾಗಲೇ ಡ್ರೋನ್ ಪ್ರತಾಪ್ ಅರೆಸ್ಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಡಬಲ್ ಟ್ವಿಸ್ಟ್: ಮನೆಯಿಂದ ಹೊರ ಹೋದ ಗೋಲ್ಡ್ ಸುರೇಶ್
ಇದೀಗ ಪ್ರಕರಣಕ್ಕೆ ಸಹಕಾರ ಕೊಟ್ಟ ಮತ್ತಿಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಕ್ಯಾಮೆರಾ ಮ್ಯಾನ್ ವಿನಯ್ ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್ ಬಂಧಿತ ಆರೋಪಿಗಳು. ಡ್ರೋನ್ ಪ್ರತಾಪ್ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದ. ಈ ಹಿನ್ನೆಲೆ ಸ್ಥಳ ಮಹಜರು ನಡೆಸಿದ ಪೊಲೀಸರು ಶನಿವಾರ ಮಧ್ಯರಾತ್ರಿ ಬೆಂಗಳೂರಿನಲ್ಲಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೋರ್ವ ಆರೋಪಿ ಫಾರಂ ಹೌಸ್ ಮಾಲೀಕ ಜಿತೇಂದ್ರ ಜೈನ್ ಸದ್ಯ ತಲೆಮರೆಸಿಕೊಂಡಿದ್ದಾನೆ.
ಇನ್ನು ಡ್ರೋನ್ ಪ್ರತಾಪ್ನನ್ನು ಮಧುಗಿರಿಯ ಜೆಎಂಎಫ್ಸಿ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣ ಸಂಬಂಧ ಡ್ರೋನ್ ಪ್ರತಾಪ್, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್ಐಆರ್ ದಾಖಲಾಗಿದೆ.