ಹುಬ್ಬಳ್ಳಿ :ಸಾಮಾಜಿಕ ಕಾರ್ಯಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹುಬ್ಬಳ್ಳಿ ತಾಲೂಕಿನ ನೂಲ್ವಿ ಸಿ ಐ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಸಿಐಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಅದರಗುಂಚಿ ಎನ್ಎಸ್ಎಸ್ ಘಟಕಗಳ ವತಿಯಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಫ್ ಭರಮಗೌಡ್ರ ಹುಟ್ಟುಹಬ್ಬದ ಪ್ರಯುಕ್ತ ಅಂಚಟಗೇರಿ ಚನ್ನಾಪುರ ರಸ್ತೆಯ ಮಧ್ಯಭಾಗದಲ್ಲಿರುವ ಬಸವ ಶ್ರೀ ಫೌಂಡೇಶನ್ ಅನಾಥಾಶ್ರಮ ಹಾಗೂ ವೃದ್ಧಾಶ್ರಮಕ್ಕೆ ಎನ್ ಎಸ್ ಎಸ್ ಸ್ವಯಂ ಸೇವಕ ಸೇವಕೀಯರು ಭೇಟಿ ನೀಡಿ ಆಶ್ರಮದಲ್ಲಿರುವ ವೃದ್ಧರಿಗೆ ಅಲ್ಪ ಉಪಹಾರವನ್ನು ನೀಡುವುದರ ಮೂಲಕ ಅವರ ಯೋಗಕ್ಷೇಮವನ್ನು ವಿಚಾರಿಸಿ ಸಾಮಾಜಿಕ ಕಳಕಳಿಯನ್ನು ಮೆರೆದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಎಫ್ ಭರಮಗೌಡ್ರ ಮಾತನಾಡಿ ಹೆತ್ತ ತಾಯಿ ಹೊತ್ತ ನಾಡನ್ನು ರಕ್ಷಣೆ ಮಾಡುವ ಜವಾಬ್ದಾರಿ ಆಯಾ ಮಕ್ಕಳ ಕರ್ತವ್ಯವಾಗಿದೆ ಅಷ್ಟೇ ಅಲ್ಲದೆ ಯಾವ ಶೈಕ್ಷಣಿಕ ಪದವಿಯನ್ನು ಪಡೆದುಕೊಂಡರೂ ಏನು ಪ್ರಯೋಜನವಿಲ್ಲ ಎಂದು ಹೇಳಿದರು.
ಸಿಬ್ಬಂದಿ ಕಾರ್ಯದರ್ಶಿಗಳಾದ ಎಸ್.ಎಂ .ಕಳಸೂರ, ಪ್ರಾಚಾರ್ಯರಾದ ಶ್ರೀಮತಿ .ಎಸ್.ಐ ಉಣಕಲ್, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಆರ್ ಎಂ ಪಾಟೀಲ್ ,ಸಿ ಎಸ್ ಭರಮಗೌಡ್ರ, ಎ ಎಂ ಬಾರಕೇರ , ಬಿಜಿ ರಾಘವೇಂದ್ರ, ಎನ್ ಎಸ್ ಎಸ್ ನಾಯಕರಾದ ಶಶಿಧರ್ ಪಟ್ಟಣ ಶೆಟ್ಟಿ ಕಿರಣ್ ಹಿಟ್ನಾಳ್ ನಾಯಕಿಯರಾದ ನೀಲಾಂಬಿಕ ಹಿರೇಮಠ್ ಎಲ್ಲ ಸ್ವಯಂ ಸೇವಕ ಸೇವಕಿಯರು ಹಾಜರಿದ್ದರು