ಬಳ್ಳಾರಿ, ನ.30: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್.ಐ.ವಿ.ಏಡ್ಸ್ ಸೋಂಕಿನಿಂದ ಈ ವರೆಗೆ 4218 ಜನರು ಸಾವನ್ನಪ್ಪಿದ್ದು. ಈಗ ಸೋಂಕಿತ 5030 ಜನರು ಏಆರ್ ಟಿ ಚಿಕಿತ್ಸೆ ಒಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. 2021 ರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಈಗ ರಾಜ್ಯದಲ್ಲಿ 11 ನೇ ಸ್ಥಾನದಲ್ಲಿದೆ. ಈ ವರ್ಷ “ಸಮುದಾಯಗಳು ಮುನ್ನಡೆಸಲಿ” ಎಂಬ ಘೋಷಣೆ ಹೆಚ್ ಐ ವಿ ಯನ್ನು ಶೂನ್ಯಕ್ಕೆ ತರಬೇಕೆಂಬ ನಿಟ್ಟನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ 10 ಇ.ಐ.ಡಿ ಕೇಂದ್ರಗಳಲ್ಲಿ, 2010 ರಿಂದ 2023 ಅಕ್ಟೋಬರ್ ವರೆಗೆ 696 ಮಕ್ಕಳಿಗೆ 6 ವಾರದ ಡಿ.ಬಿ.ಎಸ್ ಪರೀಕ್ಷೆಯನ್ನು ಮಾಡಿಸಲಾಗಿರುತ್ತದೆ. ಇವರಲ್ಲಿ 30 ಮಕ್ಕಳಿಗೆ ಹೆಚ್.ಐ.ವಿ ಸೋಂಕು ಇರುವುದು ಕಂಡು ಬಂದಿರುತ್ತದೆ. ಇಲ್ಲಿಯವರೆಗೆ 577 ಮಕ್ಕಳನ್ನು 18 ತಿಂಗಳ ನಂತರ ಹೆಚ್.ಐ.ವಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ ತಿಮಕ್ಕಳಿಗೆ ಜೆಟ್.ಐ.ವಿ ಇರುವುದು ದೃಡಪಟ್ಟಿರುತ್ತದೆಂದು ಹೇಳಿದ್ದಾರೆ.
ಎ.ಆರ್.ಟಿ ಕೇಂದ್ರಗಳು:
ಸೋಂಕಿತರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 2 ಎ.ಆರ್.ಟಿ ಕೇಂದ್ರಗಳು, ಮತ್ತು 7 ಲಿಂಕ್ ಏಆರ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ 17336 ಸೋಂಕಿತರಿಗೆ ಫ್ರೀ ವಿ.ಆರ್.ಟಿ ದಾಖಲೆ ಮಾಡಿಕೊಂಡಿದ್ದು, ಇವರಲ್ಲಿ ಪ್ರಸ್ತುತ 5030 ಜನರು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರಸ್ತುತ ನಗರಕೇಂದ್ರಗಳಲ್ಲಿ 2516, ಗ್ರಾಮೀಣ ಭಾಗದಲ್ಲಿ 587 ಮಹಿಳಾ ಲೈಂಗಿಕ ಕಾರ್ಯಕರ್ತರು, ಹಾಗು 715 ಎಮ್ಎಸ್ಎಮ್ ಜನರು ಸೋಂಕು ತಡೆಯುವ ಕಾರಗಯಗಳಲ್ಲಿ ತೊಡಗಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಈ ವರ್ಷ ಇಲ್ಲಿಯವರೆಗೆ ನಡೆಸಿದ ಪರೀಕ್ಷೆಗಳಲ್ಲಿ ನಗರದ ಓರ್ವ ಲೈಂಗಿಕ ಕಾರ್ಯಕರ್ತೆಗೆ, ಅದೇರೀತಿ ಗ್ರಾಮೀಣ ಭಾಗದಲ್ಲಿ 575 ಮಹಿಳಾ ಲೈಂಗಿಕ ಕಾರ್ಯಕರ್ತರುಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಲಾಗಿ ಅವರಲ್ಲಿ ಒಬ್ವರಿಗೆ ಮತ್ತು ಎಮ್.ಎಸ್.ಎಮ್ ಗೆ ಸಂಬಂದಿಸಿದಂತೆ 628 ಜನರಿಗೆ ಹೆಚ್.ಐ.ವಿಪರೀಕ್ಷೆ ಮಾಡಿಸಿದು ಎಮ್ಎಮ್ ಹೆಚ್.ಐ.ವಿ ಸೋಂಕು ತಗಲಿದೆ ಒಟ್ಟಾರೆ ನಾಲ್ಕು ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು 2 ಲೈಂಗಿಕ ರೋಗ ಪತ್ತೆ ಕೇಂದ್ರಗಳಿವೆ. 4729 ಪರೀಕ್ಷೆ ಮಾಡಲಾಗಿದ್ದು ಶೇ 77.66% ರಷ್ಟು ಪ್ರಗತಿ ಸಾಧಿಸಲಾಗಿದೆಂದು ಹೇಳಿದ್ದಾರೆ.