ಬೆಂಗಳೂರು:- ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದಿನಿಂದ ಸ್ಮಾರ್ಟ್ ಟ್ರಾಫಿಕ್ ಸಿಸ್ಟಂ ಜಾರಿ ಆಗಲಿದೆ. ವಾಹನ ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳ ತಡೆಗಾಗಿ ಸಂಚಾರ ಪೊಲೀಸ್ ವಿಭಾಗ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ ಇಂದಿನಿಂದ ಜಾರಿ ಆಗಲಿದೆ.
ಈ ಹೈವೇಯಲ್ಲಿ ಇನ್ನುಮುಂದೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ನೆರವಾಗಲಿದೆ. ಇಂದಿನಿಂದ ಹೆದ್ದಾರಿಯಲ್ಲಿ ಈ ಸ್ಮಾರ್ಟ್ ಟ್ರಾಫಿಕ್ ಸಿಸ್ಟಂ ಜಾರಿ ಆಗಲಿದೆ. ಈ ಮಾರ್ಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡವನ್ನು ನೇರವಾಗಿ ಫಾಸ್ಟ್ಯಾಗ್ ಖಾತೆಯಿಂದಲೇ ಕಡಿತಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಕ್ಯಾಮೆರಾಗಳು, ಸ್ಪೀಡ್ ಗನ್ಗಳು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ನೆರವಾಗಲಿವೆ.
ಇಂದಿನಿಂದ ಮೈಸೂರು-ಬೆಂಗಳೂರು ಹೆದ್ದಾರಿಯು ಸಂಪೂರ್ಣವಾಗಿ ಕ್ರಿಯಾತ್ಮಕ ಐಟಿಎಂಎಸ್ ಕಾರಿಡಾರ್ ಆಗಲಿದೆ ಎಂದು ಕರ್ನಾಟಕ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ತಿಳಿಸಿದ್ದರು.