ಬೆಂಗಳೂರು: ಸಾರಿಗೆ ಇಲಾಖೆ ಅಂದರೆ ಸಾಕು ಸಮಸ್ಯೆಗಳ ಕೂಪ,ಬೇಜವಾಬ್ದಾರಿಗಳ ಯಡವಟ್ಟು ಅನ್ನುವಷ್ಟರ ಮಟ್ಟಿಗೆ ಫೇಮಸ್. ಅಧಿಕಾರಿಗಳು ಹಾಗೂ ರೋಸ್ ಮಾರ್ಟ್ ಕಂಪನಿ ಆಟಕ್ಕೆ ವಾಹನ ಸವಾರರು ಅಂತೂ ಸುಸ್ತು ಆಗ್ಬಿಟ್ಟಿದ್ದಾರೆ.ಯಾಕೆಂದರೆ ಅಕ್ರಮ ತಪ್ಪಲಿ ಎಂಬ ಉದ್ದೇಶದಿಂದ ಆರ್ಸಿ, ಡಿಎಲ್ಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡಲಾಗುತ್ತಿದೆ.ಆದರೆ ಇದೇ ವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗುತ್ತಿದೆ.ಬರೋಬ್ಬರಿ ಹತ್ತು ದಿನದಿಂದ ಆರ್ಟಿಓ ಕಚೇರಿಗಳಲ್ಲಿ ಸ್ಮಾರ್ಟ್ ಕೊರತೆ ಎದುರಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗಲಿ ಹಾಗೂ ಅಕ್ರಮ ತಪ್ಪಲಿ ಅಂತ ಆರ್ ಟಿ ಓ ಕಚೇರಿಗಳಲ್ಲಿ ವಾಹನಗಳ ಆರ್ಸಿ ಕಾರ್ಡ್ ಹಾಗೂ ಡಿಎಲ್ ಗಳನ್ನ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡಲಾಗ್ತಿದೆ.ಆದ್ರೆ ಇದೇ ವ್ಯವಸ್ಥೆ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡಿದೆ..ಹೌದು ಆರ್ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸಾಗಿ ದಿನಗಳೇ ಗತಿಸಿದರೂ ಡಿಎಲ್ ಕೈಸೇರಿಲ್ಲನೋಂದಣಿ ಪ್ರಮಾಣ ಪತ್ರ ದ್ದೂ ಇದೇ ಸ್ಥಿತಿ ಇದೆ.ವಾಹನ ಖರೀದಿಸಿರುವವರು ಸ್ಮಾರ್ಟ್ ಕಾರ್ಡ್ ಲಭಿಸದೆ ಇರುವುದರಿಂದ ಕಾರು, ಬೈಕ್ಗಳನ್ನು ಖರೀದಿಸಿ ಮನೆಯ ಮುಂದೆ ನಿಲ್ಲಿಸುವ ಸ್ಥಿತಿ ಎದುರಾಗಿದೆ.ನಗರ ಎಲ್ಲ ಆರ್ಟಿಒಗಳಲ್ಲಿ ಪರಿಸ್ಥಿತಿ ಇದೇ ರೀತಿಯಲ್ಲಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರೋಸ್ ಮಾರ್ಟ್ ಕಂಪನಿ ಆರ್ ಟಿ ಓ ಕಚೇರಿಗಳಿಗೆ ಸ್ಮಾರ್ಟ್ ಕಾರ್ಡ್ ಪೂರೈಕೆ ಮಾಡೋ ಹೊಣೆ ಹೊತ್ತಿದೆ.ಆದ್ರೆ ಕಳೆದ ಕೆಲ ತಿಂಗಳಿಂದ ಬೇಡಿಕೆಯಷ್ಟು ಸ್ಮಾರ್ಟ್ ಕಾರ್ಡ್ಗಳನ್ನ ಕಂಪನಿ ಉತ್ಪಾದನೆ ಮಾಡ್ತಿಲ್ಲ.ಹೀಗಾಗಿ ಜನರುಪರದಾಡುತ್ತಿದ್ದಾರೆ.ಇನ್ನೂ ಸ್ಮಾರ್ಟ್ ಕಾರ್ಡ್ ಗಳಿಗೆ ಟೆಕ್ನಿಕಲ್ ಸಮಸ್ಯೆ ತಂದೊಡ್ಡಿದೆ. ಹೀಗಾಗಿ ಕಂಪನಿ ನಿರ್ಲಕ್ಷ್ಯ ದಿಂದ ಶೋರೂಂನಿಂದ ಹೊಸದಾಗಿ ವಾಹನ ಖರೀದಿಸಿದರೂ ರಸ್ತೆಗಿಳಿಸುವಂತಿಲ್ಲ. ಹಾಗೊಮ್ಮೆ ರಸ್ತೆಗೆ ಬಂದರೆ ದಂಡ ಕಟ್ಟುವುದು ಕಾಯಂ ಆಗಿದೆ. ಹೀಗಾಗಿ, ನಿತ್ಯವೂ ವಾಹನ ಸವಾರರು ಪರದಾಡುವಂತಾಗಿದೆ. ಬೆಂಗಳೂರಿನ ಯಶವಂತಪುರ, ಜ್ಞಾನಭಾರತಿ, ರಾಜಾಜೀನಗರ ಜಯನಗರ ಸೇರಿದಂತೆ ಹಲವು ಆರ್ಟಿಓ ಕಚೇರಿಗಳಲ್ಲಿ 10 ದಿನಿದಿಂದ ಲೈಸೆನ್ಸ್ ಮತ್ತು ಆರ್ಸಿ ಸ್ಮಾರ್ಟ್ ಕಾರ್ಡ್ ಕೊರತೆ ಎದುರಾಗಿದೆ.ಬೇಡಿಕೆ ತಕ್ಕಂತೆ ಕಾರ್ಡ್ ಪೂರೈಸಿ ಅಂತ ರೋಸ್ ಮಾರ್ಟ್ ಕಂಪನಿಗೆ ನೋಟೀಸ್ ನೀಡಿದ್ರೂ ಕ್ಯಾರೆ ಎನ್ನುತ್ತಿಲ್ಲ. ನಿತ್ಯ ಆರ್ಟಿಓ ಕಚೇರಿಗಳಿಗೆ ಜನ ಅಲೆದು ಅಲೆದು ಸುಸ್ತು ಆಗಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಎಲ್ಲ ಆರ್ಟಿಒ ಗಳಲ್ಲೂ ಸ್ಮಾರ್ಟ್ ಕಾರ್ಡ್ ಟೆಕ್ನಿಕಲ್ ಸಮಸ್ಯೆ ಎದುರಾಗಿದೆ. ಕೂಡಲೇ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂಬುವುದು ನೊಂದ ವಾಹನ ಸವಾರರ ಮನವಿಯಾಗಿವೆ. ಆದ್ರೆ ಸಮಸ್ಯೆಗೆ ಪರಿಹಾರ ನೀಡಬೇಕಾದ ಆರ್ ಟಿಓ ಅಧಿಕಾರಿಗಳು ರೋಸ್ ಮಾರ್ಟ್ ಕಂಪನಿಗೆ ಶ್ರೀರಕ್ಷೆ ನೀಡೋ ಪ್ರಯತ್ನ ಮಾಡ್ತಿದ್ದಾರೆ ಎನ್ನೋ ಆರೋಪ ಮಾಡಲಾಗಿದೆ. ಈ ಬಗ್ಗೆ ಆರ್ಟಿಓ ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ರೆ ಒಂದರೆಡು ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅಂತ ಹೇಳ್ತಾರೆ
ಒಟ್ಟಿನಲ್ಲಿ ಸಾರಿಗೆ ಇಲಾಖೆ ಕಚೇರಿಗಳಲ್ಲಿ ಕಳೆದ ಹತ್ತು ದಿನದಿಂದ ಸಮಸ್ಯೆ ಎದುರಾಗಿದ್ರು ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ಹೊಸ ವಾಹನ ಖರೀದಿ ಮಾಡಿದವರಿಗೆ ಆರ್ ಸಿ ಕಾರ್ಡ್ ಹಾಗೂ ಡ್ರೈವಿಂಗ್ ಪಾಸ್ ಆದವವರಿಗೆ ಡ್ರೈವರ್ ಲೈಸೆನ್ಸ್ ಸಿಗುತ್ತಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತು ಕಳ್ಳಾಟ ನಡೆಸುತ್ತಿರೋ ರೋಸ್ ಮಾರ್ಟ್ ಕಂಪನಿಗೆ ಕಡಿವಾಣ ಹಾಕಿಲ್ಲ ಅಂದರೆ ವಾಹನ ಸವಾರರು ನಿತ್ಯ ಪರದಾಟುವ ಸ್ಥಿತಿ ಎದುರಾಗಲಿದೆ.