ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ಬೆಳ್ಳುಳ್ಳಿ ಕೆಜಿಗೆ 400 ರಿಂದ 500 ರೂ. ತಲುಪಿದೆ. ಕಳೆದ ವಾರ ಕೆ.ಜಿಗೆ 200 ರಿಂದ 300 ರೂ. ಇದ್ದ ಬೆಳ್ಳುಳ್ಳಿ ದರ ಈಗ 400- 500 ರೂ.ವರೆಗೆ ಏರಿಕೆಯಾಗಿದೆ.
ಸದ್ಯಕ್ಕೆ ಬೆಳ್ಳುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಫೆಬ್ರವರಿವರೆಗೂ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕಳೆದ ಎರಡು ತಿಂಗಳಿಣಿಂದ ಏರುಗತಿಯಲ್ಲೇ ಇರುವ ಬೆಳ್ಳುಳ್ಳಿ ದರ ಇದೀಗ ಒಂದು ಕೆಜಿಗೆ 400 ರಿಂದ 500 ರೂ. ವರೆಗೆ ಮುಟ್ಟಿದೆ. ಟೊಮೆಟೊ, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.