ನವದೆಹಲಿ:- ಬೀಚಲ್ಲಿ ಫೋಟೋಶೂಟ್ಗೆ ಟೈಮಿದೆ, ಮಣಿಪುರಕ್ಕಿಲ್ಲ ಎಂದು ಪ್ರಧಾನಿ ಮೋದಿ ಗೆ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದೇವಸ್ಥಾನ ನಿರ್ಮಾಣವಾಗುತ್ತಿರುವ ಸ್ಥಳಗಳಲ್ಲಿ ಮತ್ತು ಬೀಚ್ಗಳಲ್ಲಿ ಫೋಟೋಶೂಟ್ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಗೆ ಸಮಯವಿದೆ. ಆದರೆ ಹಿಂಸಾಚಾರದಿಂದ ಬಳಲುತ್ತಿರುವ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದರು.
ಪ್ರಧಾನಿ ಮೋದಿಗೆ ಸಮುದ್ರದಲ್ಲಿ ಈಜಾಡುತ್ತಿರುವ ಫೋಟೋಶೂಟ್ಗೆ ಸಮಯವಿದೆ. ಕೇರಳ ಸೇರಿದಂತೆ ದೇವಸ್ಥಾನ ನಿರ್ಮಾಣವಾಗುತ್ತಿರುವ ಎಲ್ಲ ಕಡೆ ಅವರ ಫೋಟೋಗಳನ್ನು ನೋಡಬಹುದು. ಆದರೆ ಮಣಿಪುರದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಅಲ್ಲಿ ಜನ ಸಾಯುತ್ತಿದ್ದಾರೆ. ಆ ಮಹಾಪುರುಷ ಅಲ್ಲಿಗೆ ಏಕೆ ಹೋಗಲ್ಲ? ಅದು ದೇಶದ ಭಾಗವಲ್ಲವೇ?’ ಎಂದು ಕಿಡಿಕಾರಿದ್ದಾರೆ.