ಬೆಂಗಳೂರು:– ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಶಾಸಕ ಎಚ್ಡಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ಜಾರಿ ಮಾಡಿದೆ. ಮಾತ್ರವಲ್ಲದೇ 24 ಗಂಟೆಗಳಲ್ಲಿ ಹಾಜರಾಗಲು ಸೂಚನೆ ನೀಡಿದೆ.
ಪತಿಯ ಜೊತೆ ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪುಂಡರು..!
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಎ೧ ಆರೋಪಿ ಹೆಚ್ ಡಿ ರೇವಣ್ಷ ಅವರಗೆ ನೊಟೀಸ್ ಇಶ್ಯೂ ಆಗಿದೆ. ಆದ್ರೆ ಎ೨ ಪ್ರಜ್ವಲ್ ಗೆ ನೊಟೀಸ್ ಹೇಗೆ ಸರ್ವ್ ಮಾಡುತ್ತೆ ಎಸೈಟಿ …? ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯ ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿರುವ ಪ್ರಜ್ವಲ್ , ಎರಡು ತಿಂಗಳ ಟೂರಿಸ್ಟ್ ವೀಸಾದಲ್ಲಿ ತೆರಳಿದ್ದಾರೆ.
ಸದ್ಯ ಪ್ರಜ್ವಲ್ ಇನ್ವೆಷ್ಟಿಗೇಷನ್ ಎಸೈಟಿಗೆ ಮುಖ್ಯವಾಗಿದ್ದು, ಎ೧ ಆರೋಪಿ ಹೆಚ್ ರೇವಣ್ಣ ಆಗಿದ್ರೂ ಪ್ರಕರಣಗಳು ಹೊರ ಬಂದಿದ್ದು ಪ್ರಜ್ವಲ್ ರೇವಣ್ಣ ವಿಡಿಯೋಗಳಿಂದ. ಹೀಗಾಗಿ ಪ್ರಜ್ವಲ್ ರೇವಣ್ಣ ಸ್ಟೇಟ್ಮೆಂಟ್ ಇಲ್ಲಿ ಅಗತ್ಯವಿದೆ. ಹೀಗಾಗಿ ಪ್ರಜ್ವಲ್ ರೇವಣ್ಣನಿಗೆ ನೊಟೀಸ್ ಕೊಟ್ಟು ಕರೆಸಿಕೊಳ್ಳೋದು ಹೇಗೆ .. ಈಗಾಗಲೆ ತನಿಖೆಗೆ ಬೇಕು ಎಂದರೆ ಪ್ರಜ್ಬಲ್ ಹಾಜರಾಗ್ತಾನೆ ಎಂದು ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಅಕಸ್ಮಾತ್ ಪ್ರಜ್ವಲ್ ಎಸೈಟಿ ಅಗತ್ಯತೆಗೆ ಇಲ್ಲದಿದ್ದಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗಬಹುದು . ಇತ್ತ ಒಬ್ಬ ಎಂಪಿ ತಲೆ ತಪ್ಪಿಸಿಕೊಂಡಿದ್ದಾನೆಂದರೆ ಇಡೀ ರಾಜ್ಯಕ್ಕೆ ಮುಜುಗರ. ಅರೋಪಿಗಾಗಿ ಇಂಟರ್ ಪೋಲ್ ಮುಖಾಂತರ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೊಟೀಸ್ ಜಾರಿ ಸಾಧ್ಯತೆ ಇದೆ. ಅಥವಾ ಇಂಟರ್ ಪೋಲ್ ಮೊರೆ ಹೋಗ್ತಾರಾ ಎಸೈಟಿ …? ಎಂಬೆಲ್ಲಾ ಪ್ರಶ್ನೆ ಕಾಡತೊಡಗಿದೆ.
ಈಗಾಗಲೇ ಡ್ರೈವರ್ ಕಾರ್ತಿಕ್ ನನ್ನ SIT ವಿಚಾರಣೆಗೊಳಪಡಿಸಿದೆ. ಸಂತ್ರಸ್ತೆಯ ಹೇಳಿಕೆಯನ್ನೂ ಎಸೈಟಿ ದಾಖಲಿಸಿದೆ. ಸದ್ಯ ನಾಳೆ ಅಥವಾ ನಾಡಿದ್ದು crpc164 ಅಡಿಯಲ್ಲಿ SIT ಸ್ಟೆಟ್ಮೆಂಟ್ ಪಡೆಯಲಿದೆ. ಸದ್ಯ ಪ್ರಜ್ವಲ್ ರೇವಣ್ಣ ತನಿಖೆ ನಡೆಸಲೇಬೇಕಾದ ಅಗತ್ಯತೆ ಎಸೈಟಿಗಿದೆ.