ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಿಂದ ಹೊರಗುಳಿದಿರುವ ಸಿರಾಜ್ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸದ್ಯ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಐದು ಒಡೆದ ಹೃದಯಗಳ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ, ಮೊನ್ನೆಯಷ್ಟೇ ಮುಗಿದ ಐಪಿಎಲ್ ಹರಾಜಿಗೂ ಸಿರಾಜ್ ಅವರ ಇನ್ಸ್ಟಾಗ್ರಾಂ ಸ್ಟೋರಿಗೂ ತಳುಕು ಹಾಕಲಾಗಿದೆ.
ಸಿರಾಜ್ ಅವರು ಒಡೆದ ಹೃದಯದ ಎಮೋಜಿಯನ್ನು ಯಾವ ಉದ್ದೇಶದಿಂದ ಪೋಸ್ಟ್ ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಆದರೆ, ಐಪಿಎಲ್ ಹರಾಜಿನ ಬೆನ್ನಲ್ಲೇ ಈ ರೀತಿಯ ಸ್ಟೋರಿ ಪೋಸ್ಟ್ ಮಾಡಿರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಆರ್ಸಿಬಿ ಕ್ಯಾಂಪ್ನಲ್ಲಿ ಏನು ನಡೆಯುತ್ತಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹರಾಜಿನಲ್ಲಿ ಆರ್ಸಿಬಿ ತೊಡಗಿಸಿಕೊಂಡ ರೀತಿ ಸಿರಾಜ್ಗೆ ಬೇಸರ ತರಿಸಿರಬಹುದಾ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಇನ್ನು ಡಿ.19ರಂದು ದುಬೈನಲ್ಲಿ ನಡೆದ ಮಿನಿ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ತಂಡ ಸಿರಾಜ್ ಅವರನ್ನು ರೀಟೇನ್ ಮಾಡಿಕೊಂಡಿದೆ. ಐಪಿಎಲ್ ಹರಾಜಿನಲ್ಲಿ ಅಲ್ಜರಿ ಜೋಸೆಫ್, ಟಾಮ್ ಕರ್ರನ್, ಲುಕಿ ಫರ್ಗೂಸನ್ ಹಾಗೂ ಮೂವರು ಅನ್ಕ್ಯಾಪ್ಡ್ ಭಾರತೀಯ ಆಟಗಾರರನ್ನು ಖರೀದಿಸಿದೆ.
ಆರ್ಸಿಬಿ ಹರಾಜು ಪೂರ್ವ ತಂಡ: ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಹಿಮಾನ್ ಟೋಪ್ಲೆ ಶರ್ಮಾ, ರಾಜನ್ ಕುಮಾರ್, ವೈಶಾಕ್ ವಿಜಯ್ ಕುಮಾರ್.