ಆಸ್ಟ್ರೇಲಿಯಾ ವಿರುದ್ಧದ ಸರಣಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಲ ಆಟಗಾರರ ಪ್ರದರ್ಶನದಿಂದ ಕೋಚ್ ಗೌತಮ್ ಗಂಭೀರ್ ಪ್ರಭಾವಿತರಾಗಿದ್ದಾರೆ. ಅದರಲ್ಲೂ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಗಂಭೀರ್ ಮುಕ್ತಕಂಠದಿಂದ ಹೊಗಳಿದ್ದಾರೆ.
ಯುವನಿಧಿ: ಜ.6 ರಿಂದ ವಿಶೇಷ ನೋಂದಣಿ ಅಭಿಯಾನ: ಫುಲ್ ಡೀಟೈಲ್ಸ್ ಇಲ್ಲಿ ತಿಳಿಯಿರಿ!
ಸಿಡ್ನಿ ಟೆಸ್ಟ್ ಬಳಿಕ ಮಾತನಾಡಿದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತ ತಂಡದ ಸೋಲಿನ ಹೊರತಾಗಿಯೂ ಕೆಲ ಧನಾತ್ಮಕ ವಿಷಯಗಳು ಸಹ ಕಂಡು ಬಂದಿದೆ. ಈ ಸರಣಿಯಲ್ಲಿ ಹೊಸ ಆಟಗಾರರ ಪ್ರದರ್ಶನ ಅತ್ಯಂತ ಶುಭ ಸೂಚನೆ ಎಂದು ಗಂಭೀರ್ ಬಣ್ಣಿಸಿದ್ದಾರೆ.
ಯಶಸ್ವಿ ಜೈಸ್ವಾಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್… ಎಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರೆಲ್ಲರೂ ಎಷ್ಟು ಟೆಸ್ಟ್ ಸರಣಿಗಳನ್ನು ಆಡಿದ್ದಾರೆ ಎಂಬುದು ಗೊತ್ತಿಲ್ಲ. ಇದಾಗ್ಯೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿರುವುದು ಪಾಸಿಟಿವ್ ವಿಷಯ ಎಂದರು.
ಅದರಲ್ಲೂ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರ ಅಟಿಟ್ಯೂಡ್ನಿಂದ ಪ್ರಭಾವಿತನಾಗಿದ್ದೇನೆ. ಸರಣಿಯುದ್ದಕ್ಕೂ ಸಿರಾಜ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಇದಾಗ್ಯೂ ಪ್ರತಿ ಬಾಲ್ನಲ್ಲಿ ಅವರು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಓಡುತ್ತಿದ್ದರು.
100% ಫಿಟ್ ಆಗಿಲ್ಲದ ಆಟಗಾರನೊಬ್ಬ ಹೀಗೆ ತಂಡಕ್ಕಾಗಿ ಸಂಪೂರ್ಣ ತೊಡಗಿಸಿಕೊಂಡಿರುವುದನ್ನು ನಾನು ನೋಡಿಲ್ಲ ಎಂದು ಭಾವಿಸುತ್ತೇನೆ. ಇದು ದೇಶದ ಮೇಲೆ ಮೊಹಮ್ಮದ್ ಸಿರಾಜ್ಗೆ ಇರುವ ಬದ್ಧತೆಯನ್ನು ತೋರಿಸುತ್ತದೆ ಎಂದರು.