ಬೆಂಗಳೂರು:- ಕರ್ನಾಟಕದಲ್ಲಿ ಕಳೆದ 1 ತಿಂಗಳಿಂದ ಹೊಸ ಡಿಎಲ್, ಆರ್ಸಿ ಸ್ಮಾರ್ಟ್ ಕಾರ್ಡ್ ಸಿಗುತ್ತಿಲ್ಲ. ಇದೇ ವಿಚಾರವಾಗಿ ಇಂದು ಸಾರಿಗೆ ಸಚಿವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದರು.
ಪಂಚಿಂಗ್ ಮಷಿನ್ ಗೆ ಸಿಲುಕಿ ಬಾಲ ಕಾರ್ಮಿಕನ ಬಲಗೈ ನಜ್ಜುಗುಜ್ಜು! ಮಾಲೀಕರು ಪರಾರಿ!
ಇದಕ್ಕೆ ನಗರದಲ್ಲಿ ಉತ್ತರಿಸಿದ ಸಚಿವರು, ಡಿಎಲ್ ಹಾಗೂ ಆರ್ಸಿ ಸ್ಮಾರ್ಟ್ ಕಾರ್ಡ್ಗಳನ್ನು ರವಾನಿಸುವಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಡಿಎಲ್ ಹಾಗೂ ಆರ್ಸಿ ಸ್ಮಾರ್ಟ್ ಕಾರ್ಡ್ಗಳ ಪೂರೈಕೆ ಗುತ್ತಿಗೆಯನ್ನು ಪಡೆದಿದ್ದ ರೋಸ್ಮೆರ್ಟಾ ಕಂಪನಿ ಟೆಂಡರ್ ಮುಕ್ತಾಯವಾಗಿದೆ. ಹೀಗಾಗಿ, ಸ್ಮಾರ್ಟ್ ಕಾರ್ಡ್ಗಳ ಪೂರೈಕೆಗಾಗಿ ಹೊಸ ಟೆಂಡರ್ ಆಹ್ವಾನಿಸಿದ್ದೇವೆ. ಪ್ರತಿದಿನ 20 ಸಾವಿರ ಡಿಎಲ್ ಕಾರ್ಡ್ಗಳು ಹೊಸದಾಗಿ ಬರ್ತಿದ್ದು, ಪೇಡಿಂಗ್ ಉಳಿಯುತ್ತಿವೆ. 15 ದಿನದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಇನ್ನೂ ರಾಜ್ಯದಲ್ಲಿ ಹೊಸ ವಾಹನಗಳನ್ನು ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಕಳೆದ ಒಂದೆರಡು ತಿಂಗಳಿನಿಂದ ಹೊಸ ವಾಹನ ಖರೀದಿಸುವವರಿಗೆ ಆರ್ಟಿಒ ಶಾಕ್ ನೀಡಿದೆ. ಹೊಸ ವಾಹನದಲ್ಲಿ ಜಾಲಿ ರೈಡ್ ಮಾಡಬೇಕು ಎನ್ನುವವರಿಗೆ ಕಳೆದ ಒಂದೆರಡು ತಿಂಗಳಿಂದ ಡಿಎಲ್, ಆರ್ಸಿ ಬುಕ್ಕೇ ಸಿಗ್ತಿಲ್ಲ.
ಹೊಸ ವರ್ಷದ ಹೊತ್ತಲ್ಲಿ ಲಕ್ಷಾಂತರ ಜನ ಹೊಸ ವಾಹನಗಳನ್ನು ಖರೀದಿಸುತ್ತಾರೆ. ಬೈಕ್, ಕಾರು, ಆಟೋ, ಲಾರಿ.. ಹೀಗೆ ಜನರ ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಖರೀದಿಸುತ್ತಾರೆ. ಆದರೆ, ಕಳೆದ ಒಂದು ತಿಂಗಳಿಂದ ಖುಷಿಯಿಂದ ಹೊಸ ವಾಹನಗಳನ್ನ ಖರೀದಿಸಿದ ವಾಹನ ಸವಾರರಿಗೆ ಆ ಖುಷಿ ಉಳಿದಿಲ್ಲ. ಏಕೆಂದರೆ ಹೊಸ ವಾಹನಗಳು ಓಡಿಸೋಕೆ ಆಗತ್ತಿಲ್ಲ. ಅಂತೂ ಇಂತೂ ಸಾಹಸ ಮಾಡಿ ರಸ್ತೆಗಿಳಿದರೆ ದಂಡ ಖಚಿತ ಎನ್ನುವಂತಾಗಿದೆ.