ಅಥಣಿ:- ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸ್ಕೂಟಿ ಕೀ ವಿಚಾರಕ್ಕೆ ಯುವಕನೊಬ್ಬ ತನ್ನ ಸ್ವಂತ ದೊಡ್ಡಮ್ಮನನ್ನೆ ಬಲಿ ತೆಗೆದುಕೊಂಡ ಅಮಾನವೀಯ ಘಟನೆ ನಡೆದಿದೆ.
ನಿನ್ನೆ ರಾತ್ರಿ 11: ಗಂಟೆ ಸುಮಾರಿಗೆ ಹೊಸ ಸ್ಕೂಟಿ ವಿಚಾರವಾಗಿ ಸಂಬಂಧಿಯಿಂದಲೇ ಮಹಿಳೆ ದಾರುಣ ಸಾವು ಗ್ರಾಮದಲ್ಲಿ ಆತಂಕ ಹುಟ್ಟಿಸಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಸಂಶಯಿತ ಆರೋಪಿ ಸಂಜಯ ಸಾವರ್ಡೇಕರ್ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದೊಡ್ಡಮ್ಮನನ್ನೆ ರಾಡ್ ನಿಂದ ಹೊಡೆದು ಹತ್ಯ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಸಾವಿಗೆಡಾದ ಮಹಿಳೆಯ ಸೊಸೆ ತಿಳಿಸಿದ್ದಾರೆ.
ಶ್ರೀಮತಿ ಮಂಗಲ ತುಕಾರಾಮ ಸಾವರ್ಡೆಕರ (56) ಸೋಮವಾರ ರಾತ್ರಿ ಬಾಹಿರ್ದಸೆಗೆ ಹೋಗಿ ಬರುತ್ತಿದ್ದಾಗ ಸಂಶಯಿತ ಆರೋಪಿ ಸಂಜಯ ರಾಜಾರಾಮ ಸಾವರ್ಡೆಕರ ಇವನು ಕಬ್ಬಣದ ರಾಡ್ (ಸಲಾಕೆ) ಕೈಯಲ್ಲಿ ಹಿಡಿದು ಮೃತ ಮಹಿಳೆ ಮಂಗಲ ಈತಳಿಗೆ ಹೊಡೆದಿದ್ದಾನೆ ಮಂಗಲನ ಮಗ ಚಂದ್ರಕಾಂತ ಈತನು ಮನೆಯಲ್ಲಿ ಸ್ಕೂಟಿ ತಂದು ತನ್ನ ಮಡದಿಗೆ ಕಲಿಸುತ್ತಿದ್ದನು ಆ ನಂತರ ಸೊಸೆ ಸುಜಾತ ಸೆಡ್ಡಿನಲ್ಲಿ ಸ್ಕೂಟಿ ಹಚ್ಚಿ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ. ಇನ್ನು ಘಟನೆಯ ಕುರಿತು ಮಾಜಿ ಗ್ರಾಂ ಪಂಚಾಯ್ತಿ ಅಧ್ಯಕ್ಷ ತುಕಾರಾಮ ಶೆಳಕೆ ಮಾತನಾಡಿ ಈ ಘಟನೆ ಯಾರೂ ಊಹಿಸಲಾರದ ಅಮಾನವೀಯ ಕೃತ್ಯವಾಗಿದ್ದು, ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇಂಥಹ ಘಟನೆಗಳು ಮತ್ತೆ ಮರುಕಳಿಸದಂತೆ ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದ್ದಾರೆ.
ಸಂಶಯಿತ ತನಿಖೆಗಾಗಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಘಟನೆಗೆ ಮುಖ್ಯ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ. ಈ ಘಟನೆಯ ಮಾಹಿತಿಯು ಮಿರಜ್ ಗಾಂಧಿ ಚೌಕ ಪೊಲೀಸ್ ಠಾಣೆಗೆ ಲಭ್ಯವಾದ ನಂತರ ಅವರು ಆಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.