ಗದಗ: ಈ ಬಾರಿ ಎಲ್ಲೆಡೆ ಉತ್ತಮ ಮಳೆ ಆಗಿದ್ದು ಬಹುತೇಕ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಸಿಂಗಟಾಲೂರು ಬ್ರಿಜ್ ಕಂ ಬ್ಯಾರೇಜ್ ಕೂಡಾ ಸಂಪೂರ್ಣ ಭರ್ತಿ ಆಗಿದ್ದು ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಸ್ವಾತಂತ್ರ್ಯ ದಿನಾಚರಣೆ ರಜೆ ಹಿನ್ನೆಲೆ ಪ್ರವಾಸಿಗರ ದಂಡೇ ಸಿಂಗಟಾಲೂರು ಬ್ಯಾರೇಜ್ ಗೆ ಹರಿದು ಬಂದಿತ್ತು. ಗೆಳೆಯರು, ಮಕ್ಕಳು ಕುಟುಂಬ ಸಮೇತ ಜನ್ರು ಬಂದು ಎಂಜಾಯ್ ಮಾಡಿದ್ರು.
ಬ್ಯಾರೇಜ್ ಹಲವು ಕ್ರಸ್ಟ್ ಗೇಟುಗಳ ಮೂಲಕ ನೀರನ್ನ ಹೊರಬಿಡ್ತಾ ಇದ್ದು ಹಾಲಿನ ನೊರೆಯಂತೆ ಹರಿಯುವ ನೀರನ್ನ ನೋಡಿ ಪ್ರವಾಸಿಗರು ಕಣ್ತುಂಬಿಕೊಂಡ್ರು. ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ಖುಶಿ ಪಟ್ಟರು.