Ayodhya Ram Mandir: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನಾ (Ramlala Pran Pratishtha) ಕಾರ್ಯಕ್ಕೆ ಆಯೋಧ್ಯೆಗೆ ಅಯೋಧ್ಯೆಯೇ (Ayodhya) ಸಿಂಗಾರಗೊಳ್ಳುತ್ತಿದೆ. ರಾಮಮಂದಿರದಲ್ಲಿ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಯೋಧ್ಯೆಯನ್ನು ರಾಮಾಯಣದ ಕತೆಯಲ್ಲಿರುವ ಪ್ರತೀಕದಂತೆಯೇ
ಸಜ್ಜುಗೊಳಿಸಲಾಗುತ್ತಿದೆ.ರಾಮಾಯಣ ಕಾಲದ ಬಹುದೊಡ್ಡ ಸಾಕ್ಷಿಯಾಗಿ ಉಳಿದಿರುವ ರಾಮ್ ಕೀ ಪೌರಿ (Ram ki Pauri) ಯನ್ನು ಸುಂದರವಾಗಿ ಅಲಂಕರಿಸುತ್ತಿದ್ದಾರೆ. ಈ ಜಾಗದ ಐತಿಹಾಸಿಕ ಹಿನ್ನೆಲೆ ರಾಮ ಭಕ್ತರಿಗೆ ತಿಳಿಸಲು ಎಲ್ಲ ರೀತಿಯ ಸಿದ್ಧತೆಗಳೂ ಶುರುವಾಗಿವೆ
ರಾಮನ ಮೆಟ್ಟಿಲು (ರಾಮ್ ಕೀ ಪೌರಿ) ಎಂದರೇನು?: ಹಿಂದಿ ಭಾಷೆಯಲ್ಲಿ ಬರುವ ಪೌರಿಗೆ ಕನ್ನಡದಲ್ಲಿ ಮೆಟ್ಟಿಲು ಎಂದು ಅರ್ಥ. ರಾಮನ ಮೆಟ್ಟಿಲು ಎನ್ನುವುದು ಸರಯೂ ನದಿಯ ತಟದಲ್ಲಿರುವ ಪ್ರದೇಶ. ಹುಣ್ಣಿಮೆಯ ದಿನ ಈ ಜಾಗ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ. ಸರಯೂ ನದಿ ತಟದಲ್ಲಿರುವ ಈ ಘಟ್ಟದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲ ಪಾಪ ಕಳೆದುಹೋಗುತ್ತದೆ ಎಂಬುದು ಭಕ್ತರ ಪ್ರತೀತಿ. ಈ ಮೆಟ್ಟಿಲುಗಳ ಮೂಲಕ ಸರಯೂ ನದಿಯಲ್ಲಿ ಸ್ನಾನಕ್ಕಿಳಿಯಬಹುದು.
ಪೌರಾಣಿಕ ಕಥೆಗಳ ಪ್ರಕಾರ, ಪ್ರಭು ಶ್ರೀರಾಮಚಂದ್ರನೂ ಕೂಡಾ ಇದೇ ಮೆಟ್ಟಿಲುಗಳಲ್ಲಿ ಸ್ನಾನಕ್ಕೆ ಬರುತ್ತಿದ್ದರಂತೆ. ಬಳಿಕ ಬ್ರಾಹ್ಮಣರಿಗೆ ದಾನ ಧರ್ಮಗಳನ್ನು ಮಾಡುತ್ತಿದ್ದರಂತೆ.
ರಾಮನ ಮೆಟ್ಟಿಲಿನ ಪಕ್ಕದಲ್ಲಿ ನಾಥ ನಾಗೇಶ್ವರ ಮಂದಿರ, ಚಂದ್ರ ಹರಿ ಮಂದಿರ, ವಿಷ್ಣು ಹರಿ ಮಂದಿರ ಮತ್ತು ಸರಯೂ ಮಂದಿರ ಇವೆ. 1984-85ನೇ ವರ್ಷದಲ್ಲಿ ರಾಮ್ ಕೀ ಪೌರಿಯನ್ನು ಪುನರ್ ನಿರ್ಮಾಣ ಮಾಡಲಾಗಿತ್ತು