ಹುಬ್ಬಳ್ಳಿ: ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆದು ಹೋಗಿರುವ ಅಮಾನವೀಯ ಘಟನೆ ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟೀಲ್ ಗಲ್ಲಿಯ ಹತ್ತಿರದ ಏಳು ಮಕ್ಕಳ ತಾಯಿ ಗುಡಿ ಹತ್ತಿರ ನಡೆದಿದೆ.
ಯಾರೋ ನವಜಾತ ಗಂಡು ಶಿಶುವನ್ನು ಬಿಸಾಡಿ ಹೋಗಿದ್ದು,
ಎಎಸ್ಐ ಕುಸುಗಲ್ ಎಂಬುವವರು ಕರ್ತವ್ಯಕ್ಕೆ ಹೋದ ಸಂದರ್ಭದಲ್ಲಿ ನವಜಾತ ಶಿಶುವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಎಎಸ್ಐ ಕುಸುಗಲ್ ಅವರ ಮಾಹಿತಿ ಆಧರಿಸಿ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಪೊಲೀಸರು ಆಗಮಿಸಿದ್ದು,
ನವಜಾತ ಶಿಶುವನ್ನು ಕೆ ಎಂ ಸಿ ಆರ್ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಬೀದಿಬದಿಯಲ್ಲಿ ಈ ಶಿಶುವನ್ನು ಯಾರು ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಬೆಂಡಿಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.