ಕೋಲಾರ : ತನ್ನ ಹೆಂಡತಿ ನೋಡೋಕೆ ಸುಂದರವಾಗಿದ್ದಾಳೆ ಅಂತ ನಿನ್ನಷ್ಟೇ ಸುಂದರವಾದ ಆಭರಣ ಹಾಗೂ ಹಣವನ್ನು ನಿನ್ನ ತವರು ಮನೆಯಿಂದ ತರಬೇಕು ಎಂದು ವರದಕ್ಷಿಣೆ ಕಿರುಕುಳ ಕೊಟ್ಟ ಗಂಡ, ತನ್ನ ಮುದ್ದಾದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ. ಪತ್ನಿಯ ಕತ್ತು ಹಿಸುಕಿ ಪತ್ನಿಯೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಮೃತ ಮಹಿಳೆಯ ಕುಟುಂಬಸ್ಥರಿಂದ ಆಕೆಯ ಗಂಡನ ಮೇಲೆ ಆರೋಪ ಮಾಡಲಾಗಿದೆ. ಕೋಲಾರದ ಮಿಲ್ಲತ್ ನಗರದಲ್ಲಿ ಘಟನೆ ನಡೆದಿದೆ. ಮಿಲ್ಲತ್ ನಗರದ ಮಾಹೇನೂರ್ ( 22) ಮೃತ ಮಹಿಳೆಯಾಗಿದ್ದಾಳೆ. ಗಂಡ ಸಯ್ಯದ್ ಶುಹೇಬ್ ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಮದುವೆ ಮಾಡಿಕೊಟ್ಟ ನಂತರ ವರದಕ್ಷಿಣೆ ಕಿರುಕುಳ ಕೊಟ್ಟು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮಹಿಳೆ ಮನೆಯವರು ದೂರು ನೀಡಿದ್ದಾರೆ.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಕಳೆದ ಎರಡು ವರ್ಷಗಳ ಹಿಂದೆ ಮದುವೆ ಮಾಹೇನೂರ್ ಹಾಗೂ ಸಯ್ಯದ್ ಶುಹೇಬ್ಗೂ ಮದುವೆಯಾಗಿತ್ತು. ಆರಂಭದಲ್ಲಿ ಹೆಂಡತಿ ಯೊಂದಿಗೆ ಚೆನ್ನಾಗಿಯೇ ಇದ್ದ ಪತಿ ಕೆಲವೇ ದಿನಗಳಲ್ಲಿ ತನ್ನ ವರಸೆಯನ್ನು ಬದಲಿಸಿದ್ದಾನೆ. ನೀನು ಸುಂದರವಾಗಿದ್ದೀಯ, ಆದರೆ ಹಣವನ್ನು ತಂದಿಲ್ಲ. ನೀನು ನಿನ್ನ ತವರು ಮನೆಯಿಂದ ಹಣ ಹಾಗೂ ಆಭರಣ ತರಬೇಕು ಎಂದು ನಿರಂತರವಾಗಿ ಕಿರುಕುಳ ನೀಡುತ್ತಿ ದ್ದನಂತೆ. ಈಗ ಇದೇ ವರದಕ್ಷಿಣೆ ವಿಚಾರವಾಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಘಟನೆ ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.