ಹಾಟ್ ತಾರೆ ಸಿಮ್ರನ್ ಕೌರ್ ಸಲಾರ್ ಸಿನಿಮಾದ ಮಾದಕ ಗೀತೆಗೆ ಹೆಜ್ಜೆ ಹಾಕಿದ್ದಾರೆ ಎನ್ನುವ ಮಾಹಿತಿ ತೆಲುಗು ಚಿತ್ರೋದ್ಯಮದಲ್ಲಿ ಹರಿದಾಡುತ್ತಿದೆ. ಅದ್ಧೂರಿ ಸೆಟ್ ನಲ್ಲಿ ಸಿಮ್ರನ್ ಮತ್ತು ಪ್ರಭಾಸ್ ಹಾಟ್ ಹಾಡಿಗೆ ಹೆಜ್ಜೆ ಹಾಕಿದ್ದಾರಂತೆ. ಸಲಾರ್ ಸಿನಿಮಾದ ಹುಕ್ ಸಾಂಗ್ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ತೆಲುಗಿನಲ್ಲಂತೂ ಭಾರೀ ಸುದ್ದಿ ಆಗಿದೆ.
ಸಲಾರ್ (Salaar) ಸಿನಿಮಾದ ರಿಲೀಸ್ ಗೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮಲಯಾಳಂ ಭಾಷೆಯ ಸಲಾರ್ ಸಿನಿಮಾಗೆ ಪೃಥ್ವಿರಾಜ್ (Prithviraj Sukumaran) ಸಾಥ್ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಿನಿಮಾದ ಪೋಸ್ಟರ್ ವೊಂದನ್ನು ಅವರು ರಿಲೀಸ್ ಮಾಡಿದ್ದಾರೆ.
ಭಾರತೀಯ ಸಿನಿಮಾ ರಂಗ ಡಿಸೆಂಬರ್ ನಲ್ಲಿ ಮೆಗಾ ಕಾಳಗಕ್ಕೆ ಸಾಕ್ಷಿಯಾಗಲಿದೆ. ಚಿತ್ರೋದ್ಯಮದ ಮೂವರು ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ತೆಲುಗಿನ ಪ್ರಭಾಸ್, ಬಾಲಿವುಡ್ ಶಾರುಖ್ ಖಾನ್ ಮತ್ತು ಮಲಯಾಳಂ ಸಿನಿಮಾ ರಂಗದ ದಿಗ್ಗಜ ಮೋಹನ್ ಲಾಲ್ (Mohanlal) ನಟನೆಯ ಚಿತ್ರಗಳು ಒಂದೇ ದಿನದಲ್ಲಿ ರಿಲೀಸ್ ಆಗುವ ಮೂಲಕ ಭರ್ಜರಿ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋಹನ್ ಲಾಲ್ ನಟನೆಯ ನೆರು ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆ ಆಗುತ್ತಿದೆ.