ಬೆಳ್ಳಿ ಪದಕದ ಬೇಡಿಕೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಬುಧವಾರ ವಜಾಗೊಳಿಸಿತ್ತು.
ಈ ಬಗ್ಗೆ X ನಲ್ಲಿ ತಮ್ಮದೇ ಚಿತ್ರ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಆಗಸ್ಟ್ 6ರಂದು ನಡೆದ ಮಹಿಳಾ ಫ್ರೀಸ್ಟೈಲ್ 50 ಕೆ.ಜಿ ಕುಸ್ತಿ ಪಂದ್ಯದ 16 ನೇ ಸುತ್ತಿನಲ್ಲಿ ಜಪಾನ್ನ ಯುಯಿ ಸುಸಾಕಿ ವಿರುದ್ಧ ಗೆಲುವು ಸಾಧಿಸಿದಾಗ ತಾವು ತೋರಿದ ಪ್ರತಿಕ್ರಿಯೆಯನ್ನು ಫೋಟೋವನ್ನು ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ, ವಿನೇಶ್ ತಮ್ಮ ಮುಖದ ಮೇಲೆ ಅಂಗೈಗಳನ್ನು ಇಟ್ಟುಕೊಂಡು ಕುಸ್ತಿ ಮ್ಯಾಟ್ ಮೇಲೆ ಮಲಗಿ ಸಂಭ್ರಮಿಸುತ್ತಿದ್ದಾರೆ.
ಅವರು ತಮ್ಮ ಚಿತ್ರಕ್ಕೆ ಪೂರಕವಾಗಿ ಭಾವನಾತ್ಮಕ ಬಿ ಪ್ರಾಕ್ ಹಾಡು ‘ರಬ್ಬಾ ವೆ’ಯ ಜತೆಗೆ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿದ್ದಾರೆ. ಫೋಟೋ ಹಾಕಿದ ತಕ್ಷಣ ಅವರಿಗೆ ಕಾಮೆಂಟ್ಗಳು ಬರಲಾರಂಭಿಸಿವೆ. ಅನೇಕರು ಅವರನ್ನು “ಚಾಂಪಿಯನ್” ಮತ್ತು “ಗೋಲ್ಡನ್ ಗರ್ಲ್” ಎಂದು ಕರೆದಿದ್ದಾರೆ.
ಕಳೆದ ವಾರ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್ ವೇಳೆ ತೂಕ ಇಳಿಸಲು ವಿಫಲವಾದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ನ ಆಯೋಜಕರು ವಿಧಿಸಿದ ಅನರ್ಹತೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಜಾಗೊಳಿಸಿದೆ.