ಬಿಗ್ ಬಾಸ್ ಸೀಸನ್ 11 ಕೊನೆ ಹಂತಕ್ಕೆ ತಲುಪುತ್ತಿದೆ. ಕಳೆದ ವಾರ ಐಶ್ವರ್ಯ ಹೊರಗಡೆ ಬಂದಿದ್ದರು. ಈಗ ಮನೆಯಲ್ಲಿ ಕೇವಲ 9 ಸ್ಪರ್ಧಿಗಳು ಮಾತ್ರ ಉಳಿದಿದ್ದು ಇದರಲ್ಲಿ ಈ ವಾರ ಹೊರಗಡೆ ಬರುವವರು ಯಾರು ಎಂಬುದು ಕುತೂಹಲ ಇದೆ. ಇದರ ನಡುವೆ ರಜತ್ ಅವರು ಕ್ಯಾಪ್ಟನ್ ಕೂಡ ಆಗಿದ್ದಾರೆ.
ಕ್ಯಾಪ್ಟನ್ ಆದ ಸಂದರ್ಭದಲ್ಲೇ ರಜತ್ ಅವರಿಗೆ ಕಿಚ್ಚ ಸುದೀಪ್ ಕಡೆಯಿಂದ ಪತ್ರ ಬಂದಿದೆ. ‘ನಾಯಕನಿಗೂ, ಖಳನಾಯಕನಿಗೈ ವ್ಯತ್ಯಾಸ ಇಷ್ಟೇ. ಒಬ್ಬನಿಗೆ ಕೋಪ ಜಾಸ್ತಿ. ಇನ್ನೊಬ್ಬನಿಗೆ ತಾಳ್ಮೆ ಜಾಸ್ತಿ. ನೀವು ನಾಯಕನಾ ಅಥವಾ ಖಳನಾಯಕನಾ’ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆ ಪತ್ರದಲ್ಲಿ ರಜತ್ಗೆ ಕಿವಿಮಾತು ಕೂಡ ಇದೆ. ಇದಕ್ಕೆ ಉತ್ತರಿಸಿರುವ ರಜತ್ ಅವರು ‘ನಾನು ನಿಮ್ಮ ಅಭಿಮಾನಿ ಸರ್’ ಎಂದು ಹೇಳಿದ್ದಾರೆ. ಕ್ಯಾಪ್ಟನ್ ಆಗಿ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು.
ಪುರುಷರ ಫಲವತ್ತತೆ ಹೆಚ್ಚಿಸೋಕು ಸೈ! ದೇಹದ ತೂಕ ಇಳಿಸೋಕು ಸೈ ಈ ಸಿಹಿ ಕುಂಬಳಕಾಯಿ
ರಜತ್ ಅವರು ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲಿ ತುಂಬ ವೈಲ್ಡ್ ಆಗಿ ನಡೆದುಕೊಳ್ಳುತ್ತಿದ್ದರು. ಗೋಲ್ಡ್ ಸುರೇಶ್ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೇ, ಧನರಾಜ್ ಮೇಲೆ ಕೈ ಮಾಡಲು ಕೂಡ ಅವರು ಮುಂದಾಗಿದ್ದರು. ಚೈತ್ರಾ ಅವರನ್ನು ಕಂಡರೆ ರಜತ್ ಉರಿದುಬೀಳುತ್ತಿದ್ದರು. ಒಂದು ಟಾಸ್ಕ್ ರದ್ದಾಗುವಂತೆ ನಡೆದುಕೊಂಡಿದ್ದರು.
ಇನ್ನೊಂದು ಟಾಸ್ಕ್ ಆಡುವಾಗ ಉಗ್ರಂ ಮಂಜು ಜೊತೆ ಕೈ ಕೈ ಮಿಲಾಯಿಸುವ ಹಂತಕ್ಕೂ ರಜತ್ ಹೋಗಿದ್ದರು. ಆದರೆ ದಿನದಿಂದ ದಿನಕ್ಕೆ ಅವರು ಸುಧಾರಿಸಿದ್ದಾರೆ. ಶೀಘ್ರದಲ್ಲೇ ಬಿಗ್ ಬಾಸ್ ಫಿನಾಲೆ ಬರಲಿದೆ. ಈಗ ರಜತ್, ಚೈತ್ರಾ ಕುಂದಾಪುರ, ಧನರಾಜ್, ಹನುಮಂತ, ಉಗ್ರಂ ಮಂಜು, ಗೌತಮಿ, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.