ಬೆಂಗಳೂರು: ಬೆಂಗಳೂರಿನಲ್ಲಿ ಯಾವ ರಸ್ತೆಗೆ ಹೋದ್ರೂ ಕಸ.. ಗಬ್ಬು ವಾಸನೆ.. ಎಲ್ಲಿ ನೋಡಿದ್ರೂ ಕಸದ ರಾಶಿ ರಾರಾಜಿಸ್ತಿದೆ. ಇಡೀ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿ ಆಗಿ ಬದಲಾಗ್ತಿದೆ. ಇಷ್ಟು ದಿನ ನೀರು, ಚರಂಡಿ, ರಸ್ತೆ ಸಮಸ್ಯೆ ಎದುರಾಗಿತ್ತು. ಇದೀಗ ನಗರದೆಲ್ಲಡೆ ಕಸದ ಸಮಸ್ಯೆ ತಾಂಡವವಾಡುತ್ತಿದೆ.
ನಗರವಾಸಿಗಳು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಸ ಡಂಪಿಂಗ್ ಯಾರ್ಡ್ನಲ್ಲಿ ಕಸದ ಲಾರಿಗಳು ಕಿಲೋಮೀಟರ್ಗಟ್ಟಲೇ ಸಾಲುಗಟ್ಟಿ ನಿಂತಿದ್ದು,
EPF Update: PF ಖಾತೆದಾರರಿಗೆ ಶುಭ ಸುದ್ದಿ: ಈಗ ವಿವರಗಳನ್ನು ನವೀಕರಿಸುವುದು ತುಂಬಾ ಸುಲಭ!
ರಾಜಧಾನಿಯಲ್ಲೆಡೆ ಕಸದ ಸಮಸ್ಯೆ ಎದುರಾಗಿದೆ. ವಿಲೇವಾರಿಯಾಗದ ಕಸದಿಂದ ಬೆಂಗಳೂರು ಗಬ್ಬೆದ್ದು ನಾರುತ್ತಿದ್ದು, ಎಲ್ಲಿ ನೋಡಿದರೂ ಕಸದ ರಾಶಿ ಕಾಣುತ್ತಿದೆ. ಇನ್ನು ಕೊಳೆತ ಕಸದಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಕಸ ವಿಲೇವಾರಿ ಮಾಡಬೇಕಾದ ಬಿಬಿಎಂಪಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.