ಮೈಸೂರು:– ಮೈಸೂರಿನ ಕೆಆರ್ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡಲಾಗುತ್ತದೆ ಎಂದು ಮೈಸೂರು ಪಾಲಿಕೆ ಹೇಳಿದ್ದು, ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
Health Care: ಹಲ್ಲಿ ಬಿದ್ದ ಆಹಾರ ತಿಂದ್ರೆ ಏನಾಗುತ್ತೆ? ನೀವು ನೋಡಲೇಬೇಕಾದ ಸ್ಟೋರಿ!
ಸಿದ್ದರಾಮಯ್ಯ ಹೆಸರು ಇಡಲು ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದ್ದು ಅದಕ್ಕಾಗಿ ಪತ್ರಿಕಾ ಜಾಹಿರಾತು ನೀಡಿದೆ. ಕೆಆರ್ಎಸ್ ರಸ್ತೆಯಲ್ಲಿ ಅತಿ ಹೆಚ್ಚಿನ ಆಸ್ಪತ್ರೆಗಳಿವೆ. ಹೀಗಾಗಿ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರು ಇಡಲು ಮುಂದಾಗಿದೆ.
ಪಾಲಿಕೆಯ ಈ ನಿಲುವಿಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ನಾನು ಮಾಡಿರುವ ಆರೋಪದಲ್ಲಿ ಸಿದ್ದರಾಮಯ್ಯ ಎ1 ಆರೋಪಿ ಆಗಿದ್ದಾರೆ. ಅಂತಹ ಆರೋಪಿ ಹೆಸರನ್ನು ಮೈಸೂರಿನ ಪ್ರಮುಖ ರಸ್ತೆಗೆ ಇಡಲು ಹೊರಟಿರೋದು ವಿಷಾದನೀಯ ಎಂದು ಕುಟುಕಿದ್ದಾರೆ