ಬಾಗಲಕೋಟೆ:- ಸಾರ್ವಜನಿಕರ ಸಮಸ್ಯೆ ಆಲಿಸಲು ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಕೈಗೊಂಡ ಜನತಾ ದರ್ಶನ ಸಕ್ಸಸ್ ಆಗಿದ್ದು, ಶೇಖಡಾ 99 ರಷ್ಟು ಯಶಸ್ಸು ಕಂಡಿದೆ. ಈ ಬಗ್ಗೆ ಸಚಿವ ಆರ್ ಬಿ ತಿಮ್ಮಾಪುರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಹೌದು, ಬಾಗಲಕೋಟೆಯಲ್ಲಿ ಮುಖ್ಯಮಂತ್ರಿಗಳ ಜನತಾ ದರ್ಶನ ಶೇಖಡಾ ೯೯ ರಷ್ಟು ಯಶಸ್ಸು ಕಂಡಿದೆ. ಈ ಜನತಾದರ್ಶನ ದಿಂದ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ. ಸೂಚನೆ ನೀಡಲಾಯಿತು ಎಂದು ಸುದ್ದಿಗೋಷ್ಠಿ ನಡೆಸಿ ಸಚಿವ ಆರ್, ಬಿ,ತಿಮ್ಮಾಪೂರ ಮಾತನಾಡಿದರು.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳತ್ತಿರುವುದನ್ನು ನೋಡಿ ಶ್ಲಾಘಿಸಿದರು.
ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀಳಗಿ ಶಾಸಕ ಜೆ,ಟಿ,ಪಾಟೀಲ, ಶಿಕ್ಷಕರು ಶಾಲಾ ಸಮಯದಲ್ಲಿ ಖಾಸಗಿ ಫ್ಯೂಶನ್ ನಡೆಸುವಂತಿಲ್ಲ ,ಬೇಜವಬ್ದಾರಿ ಹೇಳಿಕೆ ನೀಡುವಂತಿಲ್ಲ, ಅರ್ಹ ಫಲಾನುಭವಿಗಳಿಗೆ ರೇಷನ ಕಾರ್ಡ ನೀಡಿ, ಟ್ಯೂಷನ್ ನಡೆಸುವ ಶಿಕ್ಷಕರ ಮೇಲೆ ನಿಗಾ ಇಡಿ ಎಂದು ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ಜನತಾ ದರ್ಶನ ಕಾರ್ಯಕ್ರಮಕ್ಕೆ ಒಟ್ಟು 132 ಅರ್ಜಿಗಳು ಸ್ವೀಕೃತಗೊಂಡವು, ಈ ಜನತಾ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು.