ಬಳ್ಳಾರಿ:- ಸಿದ್ದರಾಮಯ್ಯನ ಸರ್ಕಾರ ಯ ಮಾದಿಗರಿಗೆ ಮಖ್ಮಲ್ ಟೋಪಿ ಹಾಕಿದೆ ಎಂದು ಕರ್ನಾಟಕ ಮಾದರ ಚನ್ನಯ್ಯ ಸೇನೆಯ ರಾಜ್ಯಾಧ್ಯಕ್ಷ ಜಯಗೋಪಲ್ ಆಕ್ರೋಶ ಹೊರ ಹಾಕಿದ್ದಾರೆ.
4 ಸಂಬಂಧ ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಒಳ ಮೀಸಲಾತಿ ಪರಿಷ್ಕರಣೆ ಹೊಣೆಯನ್ನು ಕೆಂದ್ರದ ಹೆಗಲ ಮೇಲೆ ಹಾಕಿ ಮಾದಿಗರಿಗೆ ಮಖ್ಮಲ್ ಟೋಪಿ ಹಾಕಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಹೇಳಿಕೆಗೆ ಬದ್ದವಾಗಿಲ್ಲ, ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಅಂಗೀಕರಿಸಿ ಕೇಂದ್ರಕ್ಕೆ ಕಳಿಸುತ್ತೇವೆ ಎಂದಿದ್ರು,ಆದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕ್ರಿಯೆಯನ್ನು ನಡೆಸಿಲ್ಲ,
ಈಗಾ ಸಿಎಂ ಸಿದ್ದರಾಮಯ್ಯ ಮಾದಿಗರನ್ನು ಕೇವಲ ವೋಟ್ ಬ್ಯಾಂಕ್’ಗೆ ಬಳಸಿಕೊಳ್ತಾರೆ, ಅಹಿಂದ ಮುಖವಾಡ ಧರಿಸಿರುವ ಸಿಎಂಗೆ ನಾಚಿಕೆಯಾಗಬೇಕು ಎಂದರು
ಇನ್ನೂ ಅಮಾಯಕ ಮಾದಿಗರಿಗೆ ವಿರೋಧಿ ನಿರ್ಣಯ ಕೈಗೊಂಡು ಮರಣ ಶಾಸನ ಬರೆದಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯರ ನಕಲಿ ಅಹಿಂದ ಮುಖವಾಡ ಕಳಚಿ ಬಿದ್ದಿದೆ. ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಿದೆ. 2020ರಲ್ಲಿ ಪಂಚ ನ್ಯಾಯಾಧೀಶರ ಪೀಠವು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ, ಒಳ ಮೀಸಲಾತಿ ವಿಷಯವು ರಾಜ್ಯ ಸರ್ಕಾರದ ಪರದಿಗೆ ಬರುತ್ತದೆ, ಆಯಾ ಸರ್ಕಾರಗಳು ಕೂಡಲೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತಿಳಿಸಿದೆ. ರಾಜ್ಯ ಸರ್ಕಾರ ಇಚ್ಚಾಶಕ್ತಿಯ ಬದ್ಧತೆ ಪ್ರದರ್ಶಿಸದೆ ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಈ ಮೂಲಕ ಕರ್ನಾಟಕದ ಮಾದಿಗರ ಸಂಕುಲವನ್ನು ಕತ್ತಲೆಯ ಕೂಪಕ್ಕೆ ತಳ್ಳಿದ್ದಾರೆ. ಮಾದಿಗರಿಗೆ ಸಾಮಾಜಿಕ ನ್ಯಾಯವನ್ನು ಮೂಲೆ ಗುಂಪು ಮಾಡಿದಾರೆ,
ಸರ್ಕಾರಕ್ಕೆ ನೈಜ ಬದ್ಧತೆ, ಕಳ ಕಳಿ ಇದ್ದರೆ ಸದನದಲ್ಲಿ ಮಂಡಿಸಿ, ಅಂಗೀಕರಿಸಿ ಕೇಂದ್ರಕ್ಕೆ ಕಳಿಸಿ,. ಲೋಕಸಭಾ ಚುಣಾವಣೆಗೆ ಮುಂಚೆ ಒಳ ಮೀಸಲಾತಿ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿ. ಇಲ್ಲವಾದರೆ ಕರ್ನಾಟಕ ಮಾಧಾರ ಚೆನ್ನಯ್ಯ ಸೇನೆ ರಾಜ್ಯದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.