ಬೆಂಗಳೂರು: ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿದ್ರೆ 135 ಸೀಟು, ಆಚೆ ಹೋದ್ರೆ ಶೂನ್ಯ ಎಂದು ಮಾಜಿ ಸಚಿವ ಮುನಿರತ್ನ ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಅಲ್ಲಿ ಕಣ್ಣಿಲ್ಲದ ಮೈತ್ರಿ ನಡೆಯುತ್ತಿದೆ. ಅಂದು ಸಿಎಂ, ಡಿಸಿಎಂ ಎರಡು ಪಕ್ಷದ ಮೈತ್ರಿ. ಇಂದು ಕುಮಾರಸ್ವಾಮಿ ಅವರ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. ಡಿಸಿಎಂ ಜಾಗದಲ್ಲಿ ಪರಮೇಶ್ವರ್ ಇದ್ರು ಇಂದು ಇವರಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿದ್ರೆ 135 ಸೀಟು, ಆಚೆ ಹೋದ್ರೆ ಶೂನ್ಯ ಎಂದು ಹೇಳಿದ್ದಾರೆ.
ಹಾರ್ಟ್ ಅಟ್ಯಾಕ್ ತಡೆಯಲು ಈ ಬೀಜವೇ ಮದ್ದು: ನೀರಲ್ಲಿ ನೆನಸಿಟ್ಟು ತಿಂದ್ರೆ ಶುಗರ್-ಬಿಪಿ ಸಹ ಇರತ್ತೆ ಕಂಟ್ರೋಲ್!
ಇನ್ನೂ ಸಿದ್ದರಾಮಯ್ಯ ಅವರ ಶಕ್ತಿ ನಾನು ನೋಡಿದ್ದೇನೆ. ಸಿದ್ದರಾಮಯ್ಯ 11 ಕೆ.ವಿ ಕರೆಂಟ್ ಅಲ್ಲ, ಅವರು 650 ಕೆ.ವಿ ಕರೆಂಟ್ ಅವರನ್ನು ಮುಟ್ಟಿದ್ರೆ ಸುಟ್ಟಿಹೋಗ್ತಾರೆ. ನಾನು ಅವರ ಜೊತೆ ಐದು ವರ್ಷ ಕೆಲಸ ಮಾಡಿದ್ದೇನೆ. ಅವರಿದ್ರೆ ಜನ, ಅವರಿಲ್ಲದಿದ್ರೆ ಹಣ ಕೊಟ್ಟು ಕರೆದು ಕೂರಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯರನ್ನು ಕೊಂಡಾಡಿದ್ದಾರೆ.