ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಒಂದೆಡೆ ವಿಪಕ್ಷಗಳು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿ ರಾಜ್ಯಪಾಲರ ಆದೇಶದ ವಿರುದ್ಧ ಕಾನೂನು ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ
ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಪ್ರಾಸಿಕ್ಯೂಷನ್ ವಿಚಾರದ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲಿದ್ದಾರೆ
ಕಾಂಗ್ರೆಸ್ ನಾಯಕರ ದಂಡು ಸಿಎಂ,ಡಿಸಿಎಂ ಜೊತೆ ಹಲವು ಸಚಿವರ ಪ್ರಯಾಣ ಗೃಹ ಸಚಿವ ಪರಮೇಶ್ವರ್,ಹೆಚ್.ಸಿ.ಮಹದೇವಪ್ಪ ಬೈರತಿ ಸುರೇಶ್,ಕೆ.ಜೆ.ಜಾರ್ಜ್,ಕೆ.ಗೋವಿಂದರಾಜು ಪ್ರಯಾಣಬೆಳಗ್ಗೆ ದೆಹಲಿಗೆ ತೆರಳಿರುವ ಆರ್.ಬಿ.ತಿಮ್ಮಾಪೂರ
ಹೈಕಮಾಂಡ್ ನಾಯಕರ ಭೇಟಿಗೆ ಕೈನಾಯಕರ ಪ್ರಯತ್ನರಾಹುಲ್ ಗಾಂಧಿ,ಖರ್ಗೆ ಭೇಟಿ ಮಾಡುವ ನಾಯಕರು ರಾಜ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ