ಚಿತ್ರದುರ್ಗ:- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಮಂತಾ-ನಾಗಚೈತನ್ಯ ವಿಚ್ಚೇದನಕ್ಕೆ ಕೆಟಿಆರ್ ಕಾರಣ: ಸಚಿವೆಯ ಹೇಳಿಕೆಗೆ ಸಮಂತಾ ಹೇಳಿದ್ದೇನು!?
ಈ ಸಂಬಂಧ ಮಾತನಾಡಿದ ಅವರು, ಪರಿಸ್ಥಿತಿಯನ್ನು ಅರ್ಥ ಮಾಡ್ಕೊಂಡು ಕೆಲಸ ಮಾಡೋಣ. ಸಿದ್ದರಾಮಯ್ಯ ಒಂದು ತಪ್ಪು ಮುಚ್ಚಲು ಹೋಗಿ ತಪ್ಪಿನ ಮೇಲೆ ತಪ್ಪು ಮಾಡ್ತಾರೆ. ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಳ್ತಿದಾರೆ. ಇದರ ಅವಶ್ಯಕತೆ ಇರಲಿಲ್ಲ. ಆತ್ಮ ಸಾಕ್ಷಿ ಮತ್ತೊಂದು ಸಾಕ್ಷಿ ಎಂದು ಹೇಳುವ ಬದಲು. ಅಂದೆ ಹೌಸ್ ನಲ್ಲಿ ಮಾತಾಡಿ ಬಗೆ ಹರಿಸಿದ್ರೆ ಮುಗಿದು ಹೋಗ್ತಾ ಇತ್ತು.
ಈಗ ಅಂತಿಮ ಹಂತಕ್ಕೆ ಹೋಗಿದೆ ಕಾನೂನು ತನ್ನ ಕೆಲಸ ಮಾಡುತ್ತದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ಆದರೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಇದ್ದುಕೊಂಡು ಮಾತಾಡೋದು ಸರಿಯಿಲ್ಲ ಎಂಬ ವೈಯುಕ್ತಿಕ ಭಾವನೆ ನನ್ನದು. ತಕ್ಷಣ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಕ್ಲೀನ್ ಚಿಟ್ ತಗೊಂಡು ಮತ್ತೆ ಸಿಎಂ ಆಗಲಿ ಬೇಡ ಅನ್ನೋರು ಯಾರು ಎಂದರು.
ಆತ್ಮಸಾಕ್ಷಿ ಅನ್ನೋದಕ್ಕಿಂತ ನೈತಿಕತೆ ದೊಡ್ಡದು ಅದನ್ನು ಅವರಿಗೆ ಬಿಡುತ್ತೇನೆ. ಚರ್ಚೆಗೆ ವಸ್ತು ಆಗದಂತೆ ರಾಜೀನಾಮೆ ಕೊಡಿ ನಂತರ ನಿಮ್ಮ ಪಾರ್ಟಿ ನಿಮ್ಮ ತೀರ್ಮಾನ. ಸಿದ್ದರಾಮಯ್ಯ ಎಲ್ಲರಂತಲ್ಲ ಎಂದು ಹೇಳ್ತಾರೆ ಅದರಂತೆ ನೀವು ಎಲ್ಲರಂತೆ ಆಗಬೇಡಿ. ಮೊದಲು ರಾಜೀನಾಮೆ ಕೊಡಿ ಎಂದರು.