ಚಿತ್ರದುರ್ಗ:- ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಹುದ್ದೆಯ ಘನತೆಗೆ ತಕ್ಕಂಥ ಮಾತುಗಳನ್ನಾಡಬೇಕು ಎಂದು ಹಿರಿಯ ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ.
ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ!?… ನಿಮಗೊಂದು ಸಿಹಿ ಸುದ್ದಿ..
ಈ ಸಂಬಂಧ ಮಾತನಾಡಿದ ಅವರು, ತನಿಖೆಗೆ ರಾಜ್ಯ ಸರ್ಕಾರ ವಿನಾಕಾರಣ ಎಸ್ಐಟಿ ರಚಿಸಿದೆ, ಸಚಿವನಿಗೆ ಎಲ್ಲವೂ ಗೊತ್ತಿರುವಂತಿದೆ, ಅವರೇ ತನಿಖೆ ಪೂರ್ಣಗೊಳಿಸಿ ಚಾರ್ಜ್ಶೀಟ್ ಸಲ್ಲಿಸುತ್ತಾರೇನೋ ಎಂದು ವ್ಯಂಗ್ಯವಾಡಿದರು. ರಾಜಣ್ಣ ಬಳಿ ಎಲ್ಲ ಮಾಹಿತಿ ಇರಬಹುದು, ಎಸ್ಐಟಿ ಅಧಿಕಾರಿಗಳು ಮೊದಲು ಅವರನ್ನೇ ತನಿಖೆಗೊಳಪಡಿಸಬೇಕು ಎಂದು ಅವರು ಹೇಳಿದರು. ಪ್ರಕರಣವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ, ರಾಜಣ್ಣ ಒಬ್ಬ ಸಂಪುಟ ಸಚಿವರ ಮತ್ತು ತನಿಖೆ ಜಾರಿಯಲ್ಲಿರುವಾಗ ಇಂಥ ಹೇಳಿಕೆಗಳು ಸರ್ವಥಾ ಸಲ್ಲದು ಎಂದು ರವಿ ಹೇಳಿದರು.
ಪ್ರಕರಣದ ಸುಪ್ರೀಂ ಕೋರ್ಟ್ ಇಲ್ಲವೇ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದರೆ ಸತ್ಯಾಂಶ ಹೊರಬೀಳಲಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ ಡಿ ದೇವೇಗೌಡರೇ ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವರೆಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಹುದ್ದೆಯ ಘನತೆಗೆ ತಕ್ಕಂಥ ಮಾತುಗಳನ್ನಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.