ಬೆಂಗಳೂರು: ಸಂವಿಧಾನದ ಬಗ್ಗೆ ಗೌರವ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ MLC ರವಿಕುಮಾರ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಾಂಧಿಜಿ ಬಗ್ಗೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ನವರು, ಅಮಿತ್ ಶಾ ಅಲ್ಲ.
ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಭಾರತರತ್ನ ಕೊಡಲಿಲ್ಲ. ಶವ ಸಂಸ್ಕಾರಕ್ಕೆ ಹಣ ಕೊಡಲಿಲ್ಲ. ಅಂಬೇಡ್ಕರ್ ಅವರನ್ನ ಸೋಲಿಸಿದ್ರಿ. ದೆಹಲಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ನಮಗೆ ಅವತ್ತು ಅಧಿಕಾರ ಇದಿದ್ದರೆ ಅಂಬೇಡ್ಕರ್ ಅವರನ್ನೇ ಪ್ರಧಾನಿ ಮಾಡುತ್ತಿದ್ದೆವು. ಲಜ್ಜೆಗೆಟ್ಟ ಕಾಂಗ್ರೆಸ್ ಅಂಬೇಡ್ಕರ್ ಅವರನ್ನ ಸೋಲಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.
Diabetes: ಸಕ್ಕರೆ ಕಾಯಿಲೆ ಕಂಟ್ರೋಲ್’ಗೆ ಬರಬೇಕಾ..? ಹಾಗಾದ್ರೆ ಊಟಕ್ಕೂ ಮೊದಲು ಇದನ್ನು ತಿನ್ನಿ ಸಾಕು.!
ಮುಡಾ ಕೇಸ್ ನಲ್ಲಿ ಸಿಎಂ ಸಿಲುಕಿ ಹಾಕಿಕೊಳ್ಳುವ ರೀತಿ ಇದ್ದಾರೆ. ಅದಕ್ಕೆ ಇವರೇ ಕ್ಲೀನ್ ಚಿಟ್ ಕೊಡಿಸಿಕೊಳ್ಳೋಕೆ ಹೋಗ್ತಿದ್ದಾರೆ. ಮುಡಾ ಕೇಸ್ CBIಗೆ ಕೊಡಿ. ವಾಲ್ಮೀಕಿ ಕೇಸ್ CBI ಗೆ ಕೊಡಿ. ಸಿದ್ದರಾಮಯ್ಯ ಹಿಂದೆ ಯಡಿಯೂರಪ್ಪ ಮೇಲೆ ಆರೋಪ ಬಂದಾಗ ರಾಜೀನಾಮೆ ಕೊಡಿ ಎಂದು ಹೇಳಿದ್ದರು.
ಈಗ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ. ಈ ಸರ್ಕಾರ ಲೂಟಿ ಮಾಡ್ತಿದೆ. ಸರ್ಕಾರದ ದುಡ್ಡಿನಲ್ಲಿ ಬೆಳಗಾವಿಯಲ್ಲಿ ಯಲ್ಲಮ್ಮನ ಜಾತ್ರೆ, ಕಾಂಗ್ರೆಸ್ ಜಾತ್ರೆ ಮಾಡ್ತಿದ್ದಾರೆ. ರಾಹುಲ್, ಮಲ್ಲಿಕಾರ್ಜುನ ಖರ್ಗೆಯವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.