ಗದಗ:- ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಗ್ಯಾರಂಟಿ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಾಸಕ ವಿನಯ ಕುಲಕರ್ಣಿ ವಿರುದ್ದ ನಡೆಯಿತಾ ಷಡ್ಯಂತ್ರ!?ಹೆದರಲ್ಲಾ, ಬೆದರಲ್ಲಾ ಎಂದ ಶಾಸಕ!
ಯಾವತ್ತಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡುತ್ತಾರೆ. ಮೊದಲು ಕಾಂಗ್ರೆಸ್ ಪರಿಸ್ಥಿತಿ ನೋಡಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ನಂತರ ಎಂದು ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ದೇಶಪಾಂಡೆ, ರಾಯರಡ್ಡಿ, ಎಲ್ಲರೂ ಹೇಳಿದ್ದರು. ನಾವೆಲ್ಲರೂ ಬಂಡೆಯ ಹಾಗೇ ಸಿಎಂ ಜೊತೆಗೆ ಇರುತ್ತೇವೆ ಎಂದಿದ್ದರು. 5 ವರ್ಷ ಅವರೇ ಮುಖ್ಯಮಂತ್ರಿ ಅಂದರೂ ಅದು ಕೃತಕತೆ, ನಾಟಿಕೀಯ ಹೇಳಿಕೆಯಾಗುತ್ತದೆ. ಯಾವತ್ತಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡುತ್ತಾರೆ. ಹೀಗಾಗಿ ಬೇರೆ ಬೇರೆ ಸಭೆಗಳನ್ನು ನಡೆಸುತ್ತಿದ್ದಾರೆ.
ಒಂದು ಕಡೆ ದಲಿತ ಮುಖ್ಯಮಂತ್ರಿ ಎಂದು ಚರ್ಚೆ ನಡೆಯುತ್ತಿದೆ. ಮುಂಚೆ ಯಾಕೆ ದಲಿತ ಮುಖ್ಯಮಂತ್ರಿಯನ್ನು ಮಾಡಲಿಲ್ಲ? ಕಾಂಗ್ರೆಸ್ಗೆ ಬಹುಮತ ಹೊಸದಾಗಿ ಬಂದಿದೀಯಾ? ಆವಾಗ ಯಾಕೆ ದಲಿತರು ನೆನಪಾಗಲಿಲ್ಲ? ಕಾಂಗ್ರೆಸ್ನ ಭ್ರಷ್ಟಾಚಾರಗಳ ಬಗ್ಗೆ ತುಂಬಾ ಸ್ಪಷ್ಟವಾಗಿ ಕೋರ್ಟ್ನಲ್ಲಿ ಆದೇಶವಾಗಿದೆ. ನಾನು ಸಿಎಂ ಅವರಿಗೆ ಪ್ರಾರ್ಥನೆ ಮಾಡುತ್ತೇನೆ. ನೀವು ರಾಜೀನಾಮೆ ಕೊಟ್ಟು ತನಿಖೆಯಲ್ಲಿ ಕ್ಲೀನ್ಚೀಟ್ ತೆಗೆದುಕೊಂಡು ಬನ್ನಿ. ಬಂದು ಮತ್ತೆ ಸಿಎಂ ಆಗಿ ಏನು ಅಭ್ಯಂತರವಿಲ್ಲ. ಸಿಎಂ ರಾಜೀನಾಮೆ ಕೊಡದೇ ಕೋರ್ಟಿಗೆ ಅಪಮಾನವಾಗಿದೆ. ಕೇವಲ ಕೋರ್ಟಿಗೆ ಅಲ್ಲ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ ಎಂದರು.