ಬೆಳಗಾವಿ:- ಸಿದ್ದರಾಮಯ್ಯ ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ಅವರೇ ಮುಖ್ಯಮಂತ್ರಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
Breaking News: ವೀಳ್ಯದೆಲೆ ತಿಂದ್ರೆ ಇಷ್ಟೆಲ್ಲಾ ಪ್ರಯೋಜನ ಇದೆ ನೋಡಿ!
ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹಾದಿ, ಬೀದಿಯಲ್ಲಿ ಚರ್ಚೆ ಮಾಡುವಂತಹದಲ್ಲ. ಧೀಮಂತ ಮತ್ತು ಗಟ್ಟಿ ನಾಯಕತ್ವ ಸಿದ್ದರಾಮಯ್ಯನವರಿಗೆ ಇದೆ. ಹಾಗಾಗಿ, ಅವರು ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎನ್ನುತ್ತಾರೋ, ಅಲ್ಲಿಯವರೆಗೆ ನಮ್ಮ ಶಾಸಕರ ಬೆಂಬಲ ಇರುತ್ತದೆ ಎಂದರು.
ಮುಡಾ ಹಗರಣದಲ್ಲಿ ಬಿಜೆಪಿಯವರು ಸುಳ್ಳು ದಾಖಲೆ ಹುಟ್ಟಿಸಿ ಏನೋ ಮಾಡುತ್ತಿದ್ದಾರೆ. ಇಂಥ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, 135 ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತ ಸಂದರ್ಭದಲ್ಲಿ, ಇದೆಲ್ಲಾ ಬಾಲಿಷ. ಈ ವಿಚಾರದಲ್ಲಿ ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವೂ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ‘ಕೈ’ ನಾಯಕರ ಹೇಳಿಕೆ ಬಗ್ಗೆ ಮಾತನಾಡಿ, ನಾನು ಓರ್ವ ಜವಾಬ್ದಾರಿಯುತ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೇಳುತ್ತಿದ್ದೇನೆ. ನಮ್ಮದು ಶಿಸ್ತಿನ ಪಕ್ಷ. ಪಕ್ಷದ ಹೈಕಮಾಂಡ್ ಮತ್ತು ಶಾಸಕರು ಇದನ್ನು ನಿರ್ಣಯಿಸುತ್ತಾರೆ. ಅಲ್ಲಿ, ಇಲ್ಲಿ, ಗಲ್ಲಿಯಲ್ಲಿ ಮಾತನಾಡುವ ವಿಷಯಗಳು ಇವಲ್ಲ ಎಂದು ಪರೋಕ್ಷವಾಗಿ ತಮ್ಮದೇ ನಾಯಕರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.