ಬೆಂಗಳೂರು: ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕಾಳಜಿ ಇಲ್ಲ ಎಂದು ಬಿಜೆಪಿ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ನಿಮಗೆ ಕಾಳಜಿ ಇಲ್ಲ. ನಿಮ್ಮ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತ. ಈ ಪ್ರಶ್ನೆಯನ್ನು ವಿಧಾನಸಭೆಯಲ್ಲೂ ಮಾಡುತ್ತೇವೆ. ಬಾಣಂತಿಯರ ಸಾವು, ಹಸುಗೂಸುಗಳ ಸಾವು ಪ್ರಕರಣ ಸಂಬಂಧ ಎಸ್ಐಟಿ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ನೀಡುವಲ್ಲೇ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ವ್ಯಸ್ತರಾಗಿದ್ದಾರೆ. ನಿಮ್ಮ ರಕ್ಷಣೆ ಮಾಡಿಕೊಳ್ಳಲು ನೀವು ಮಾಡುವ ಕೆಲಸವನ್ನು ರಾಜ್ಯದ ವಿಷಯಗಳಿಗೆ ಮಾಡುತ್ತಾ ಇಲ್ಲ ಎಂದು ರವಿ ಟೀಕಿಸಿದ್ದಾರೆ.
ಕಡಿಮೆ ಬಜೆಟ್ʼನಲ್ಲಿ ರಸಗೊಬ್ಬರದ ವ್ಯಾಪಾರ ಮಾಡಿ 15 ಲಕ್ಷದವರೆಗೂ ಲಾಭ ಪಡೆಯಿರಿ.!
ಮುರುಡೇಶ್ವರದಲ್ಲಿ ಶಾಲಾ ಮಕ್ಕಳು ನೀರು ಪಾಲಾದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಆದರೆ, ಈ ಘಟನೆ ಆಗಬಾರದಿತ್ತು. ಮಕ್ಕಳನ್ನು ನೀರಿಗೆ ಬಿಟ್ಟವರು ಯಾರು? ಶಾಲಾ ಮಕ್ಕಳು ಎಂದು ಹೇಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಆಗಬೇಕು ಎಂದು ರವಿ ಆಗ್ರಹಿಸಿದರು.